ETV Bharat / state

ಕಣ್ತಪ್ಪಿನಿಂದ ಆದ ಪ್ರಮಾದ..ಕ್ಷಣಾರ್ಧದಲ್ಲಿಯೇ ಹಾರಿಹೋಯ್ತು ಯುವಕನ ಪ್ರಾಣಪಕ್ಷಿ - ಬದಲಿ ಕಂಬ ಏರಿದ ಪರಿಣಾಮ ವಿದ್ಯುತ್​ ತಗುಲಿ ಸಾವು

ವಿದ್ಯುತ್ ಕೆಲಸಕ್ಕೆಂದು ತೆರಳಿದ ಯುವಕನೊಬ್ಬ ಬದಲಿ ಕಂಬ ಏರಿದ ಪರಿಣಾಮ ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.

gangavathi
ನಾಗರಾಜ್
author img

By

Published : Dec 21, 2020, 8:36 PM IST

Updated : Dec 21, 2020, 8:41 PM IST

ಗಂಗಾವತಿ(ಕೊಪ್ಪಳ): ಕಣ್ತಪ್ಪಿನಿಂದಾದ ಸಣ್ಣ ಪ್ರಮಾಣ ಎಂತಹ ಅನಾಹುತಕ್ಕಾದರೂ ದಾರಿಯಾದೀತು ಎಂಬುವುದಕ್ಕೆ ನಗರದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ವಿದ್ಯುತ್ ಕೆಲಸಕ್ಕೆಂದು ತೆರಳಿದ ಯುವಕನೊಬ್ಬ ಬದಲಿ ಕಂಬ ಏರಿದ ಪರಿಣಾಮ ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

ನಾಗರಾಜ್ (25) ಸುಳೇಕಲ್ ಎಂಬ ಯುವಕನೇ ಮೃತ ದುರ್ದೈವಿ. ವಿದ್ಯುತ್ ಕೆಲಸಕ್ಕೆಂದು ತೆರಳಿದ ಯುವಕ ಬದಲಿ ಕಂಬ ಏರಿದ ಪರಿಣಾಮ ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ನಗರಕ್ಕೆ ಸಮೀಪದ ಹೊಸಳ್ಳಿ ಗ್ರಾಮದಲ್ಲಿರುವ ಕಲ್ಲುಮಠದ ಸಮೀಪ ವಿದ್ಯುತ್ ಕಂಬವೊಂದರಲ್ಲಿ ಸಣ್ಣ ಕೆಲಸ ನಿಮಿತ್ತ ಕಂಬ ಏರಿದ ನಾಗರಾಜ್ ವಿದ್ಯುತ್ ಸ್ಪರ್ಶಕ್ಕೀಡಾದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಮೈಸೂರು: ಕಪಿಲಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಕೆಲಸ ಇದ್ದ ಕಂಬದಲ್ಲಿ ಅಧಿಕಾರಿಗಳು ವಿದ್ಯುತ್ (ಎಲ್ಸಿ) ಸ್ಥಗಿತಗೊಳಿಸಿದ್ದಾರೆ. ಆದರೆ, ಉದ್ದೇಶಿತ ಕಂಬದ ಬದಲಿಗೆ ಈ ಯುವಕ ಕಣ್ತಪ್ಪಿನಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ಮತ್ತೊಂದು ಕಂಬ ಏರಿದ್ದರಿಂದ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟ ಯುವಕ ಜೆಸ್ಕಾಂ ಸಿಬ್ಬಂದಿ ಅಲ್ಲ. ಹೊರ ಗುತ್ತಿಗೆ (ಕಾಂಟ್ರಾಕ್ಟ್ ಲೇಬರ್) ನೌಕರರಾಗಿದ್ದು, ಗ್ರಾಹಕರ ಬೇಡಿಕೆ ಮೆರೆಗೆ ಗುತ್ತಿಗೆದಾರರು ಕೆಲಸ ನೀಡಿರುತ್ತಾರೆ. ಘಟನೆಗೂ ಇಲಾಖೆಗೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Last Updated : Dec 21, 2020, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.