ETV Bharat / state

ಪತಿ, ಮಗುವಿಗೆ ಅನಾರೋಗ್ಯ; ಔಷಧ ಖರೀದಿಗೆ  ಬೇಕಿದೆ ನೆರವಿನ ಹಸ್ತ

ಪತಿ ಮತ್ತು ಮಗು ಅನಾರೋಗ್ಯ ಪೀಡಿತರು. ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಔಷಧ ಖರೀದಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ಯಾರಾದರೂ ಔಷಧ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ರೂಪಾ ಬೇಡಿಕೊಂಡಿದ್ದಾರೆ.

author img

By

Published : May 8, 2020, 4:21 PM IST

A woman who sought help to buy medicine
ವೆಂಕಟೇಶ್​ ಅವರ ಕುಟುಂಬ

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ನೆಲೆಸಿರುವ ವೆಂಕಟೇಶ್ ಆರೇರ್ ಅವರ ಕುಟುಂಬದ ಸ್ಥಿತಿ ನೋಡಿದರೆ ಕರುಳು ಚುರುಕ್ ಎನ್ನುತ್ತದೆ.

ಕೃಷಿ ಮಾಡುತ್ತಿದ್ದ ವೆಂಕಟೇಶ್ ಎರಡು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅವರಿಗಿರುವ ಮೂವರು ಪುಟ್ಟ ಹೆಣ್ಣು ಮಕ್ಕಳ ಪೈಕಿ ಒಂದು ಮಗುವಿಗೆ ಅನಾರೋಗ್ಯ ಕಾಡುತ್ತಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಶಾಲೆ ಮುಚ್ಚಿದ ಪರಿಣಾಮ ಅಲ್ಲಿಯೇ ಆಯಾ ಕೆಲಸ ಮಾಡಿಕೊಂಡು ಕುಟುಂಬ ಪೋಷಿಸುತ್ತಿದ್ದ ವೆಂಕಟೇಶ್ ಪತ್ನಿ ರೂಪಾ ಅವರಿಗೂ ದುಡಿಮೆ ಇಲ್ಲದಂತಾಗಿದೆ.

venktesh
ವೆಂಕಟೇಶ್​​​

ಇದರಿಂದಾಗಿ ಅನಾರೋಗ್ಯ ಪೀಡಿತ ಪತಿ ಮತ್ತು ಮಗುವಿಗೆ ಔಷಧ ಕೊಡಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಯಾರಾದರೂ ಔಷಧ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ರೂಪಾ ಅವರು ಅಂಗಲಾಚುತ್ತಿದ್ದಾರೆ.

ಸಹಾಯಕ್ಕೆ ಅಂಗಲಾಚಿದ ಮಹಿಳೆ

ವೆಂಕಟೇಶ್ ಅವರ ಔಷಧೋಪಚಾರಕ್ಕಾಗಿ ತಿಂಗಳಿಗೆ 2000 ಬೇಕು. ಬರುವ ಕಡಿಮೆ ಆದಾಯದಲ್ಲೇ ಸಂಸಾರ ನಡೆಸಬೇಕು. ಈಗ ಔಷಧ ಕೊಡಿಸಲು ಸಹ ಕಷ್ಟವಾಗುತ್ತಿದೆ. ಹೀಗಾಗಿ ಈ ತಿಂಗಳು ಔಷಧ ತಂದಿಲ್ಲ. ದಾನಿಗಳು ಮುಂದೆ ಬಂದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಕೇಳಿಕೊಂಡಿದ್ದಾರೆ.

ಲಾಕ್​​ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಅನೇಕರಿಗೆ ದಾನಿಗಳು ಸಹಾಯ ಮಾಡಿದ್ದಾರೆ. ಅದರಂತೆ ಈ ಕುಟುಂಬಕ್ಕೂ ಸಹ ಔಷಧ ಕೊಡಿಸುವ ಮೂಲಕ ನೆರವಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.