ಕೊಪ್ಪಳ: ನಕಲಿ ಸೀಲ್ ಬಳಸಿ ನಗರಸಭೆ ಸಿಬ್ಬಂದಿಯೊಬ್ಬ ಮನೆ ಕಂದಾಯವನ್ನು ಲಪಟಾಯಿಸಿದ ಆರೋಪ ಕೊಪ್ಪಳ ಜಿಲ್ಲೆ ಗಂಗಾವತಿ ನಗರಸಭೆಯಲ್ಲಿ ಕೇಳಿ ಬಂದಿದೆ.
ಗಂಗಾವತಿ ನಗರಸಭೆ ಸಿಬ್ಬಂದಿ ಮೋಯಿನ್ ಪಟೇಲ್ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದೆ. ಗಂಗಾವತಿ ನಗರಸಭೆ 13ನೇ ವಾರ್ಡಿನ ನಿವಾಸಿ ಮುನೀರ್ ಎಂಬುವವರು ನಿವೇಶನ ತೆರಿಗೆ ಪಾವತಿಸಲು ನಗರಸಭೆ ಸಿಬ್ಬಂದಿ ಮೋಯಿನ್ ಪಟೇಲ್ ಎಂಬಾತನಿಗೆ 15 ಸಾವಿರ ರೂಪಾಯಿ ನೀಡಿದ್ದರಂತೆ. ಆದರೆ, ಮೋಯಿನ್ ಪಟೇಲ್ ನಕಲಿ ಮುದ್ರೆ ಬಳಸಿ ಹಣವನ್ನು ಜೇಬಿಗಿಳಿಸಿಕೊಂಡಿದ್ದಾನೆ.
ಇನ್ನು ಈ ಕುರಿತಂತೆ ಮುನೀರ್ ಅವರು ನಗರಸಭೆಗೆ ದೂರು ನೀಡಿದ್ದಾರೆ. ಕಂದಾಯ ಹಣ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ದೇವಾನಂದ ದೊಡ್ಡಮನಿ ಸಿಬ್ಬಂದಿ ಮೋಯಿನ್ನನ್ನು ವಿಚಾರಣೆ ನಡೆಸಿದಾಗ ಮೋಯಿನ್ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಹಣ ವಾಪಾಸ್ ಕೊಡುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.