ETV Bharat / state

ಕೊಪ್ಪಳ: ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ಅಗೆದು ಗುಂಡಿ ತೋಡಿದ ರೈತ-ಪ್ರಯಾಣಿಕರ ಪರದಾಟ! - koppala farmer damaged a road

ನಿತ್ಯ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಹಲವು ರೈಲುಗಳು ಶ್ರೀರಾಮನಗರದ ನಿಲ್ದಾಣದ ಮೂಲಕ ಸಂಚರಿಸುತ್ತಿವೆ. ಆದರೆ ನಿಲ್ದಾಣಕ್ಕೆ ಹೋಗಲು ಇರುವ ರಸ್ತೆಯ ಮಾರ್ಗವನ್ನೇ ಒಬ್ಬ ರೈತ ಜೆಸಿಬಿ ವಾಹನದ ಮೂಲಕ ಅಗೆದು ಗುಂಡಿ ತೋಡಿ ಯಾರೊಬ್ಬರೂ ಓಡಾದಂತೆ ಮಾಡಿದ್ದು, ನೂರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

a farmer damegd a road which connects koppala shriramanagara railway station
ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ಅಗೆದು ಗುಂಡಿ ತೋಡಿದ ರೈತ-ಪ್ರಯಾಣಿಕರ ಪರದಾಟ
author img

By

Published : Jan 25, 2022, 9:31 AM IST

ಗಂಗಾವತಿ (ಕೊಪ್ಪಳ): ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಗಂಗಾವತಿ ತಾಲೂಕಿನ ಪ್ರಮುಖ ಪಟ್ಟಣ ಶ್ರೀರಾಮನಗರಕ್ಕೆ ರೈಲ್ವೆ ಸೇವೆಯೇನೋ ಬಂದಿದೆ. ನಿತ್ಯ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಹಲವು ರೈಲುಗಳು ಶ್ರೀರಾಮನಗರದ ನಿಲ್ದಾಣದ ಮೂಲಕ ಸಂಚರಿಸುತ್ತಿವೆ. ಆದರೆ ನಿಲ್ದಾಣಕ್ಕೆ ಹೋಗಲು ಇರುವ ರಸ್ತೆಯ ಮಾರ್ಗವನ್ನೇ ಒಬ್ಬ ರೈತ ಜೆಸಿಬಿ ಮೂಲಕ ಅಗೆದು ಗುಂಡಿ ತೋಡಿ ಯಾರೊಬ್ಬರೂ ಓಡಾದಂತೆ ಮಾಡಿದ್ದು, ನೂರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಗ್ರಾಮಕ್ಕೆ ರೈಲು ಸೇವೆ ಇದ್ದರೂ ಇಲ್ಲದಂತಾಗಿದೆ.

ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ಅಗೆದು ಗುಂಡಿ ತೋಡಿದ ರೈತ-ಪ್ರಯಾಣಿಕರ ಪರದಾಟ

ಬಡ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅತ್ಯಲ್ಪ ವೆಚ್ಚದಲ್ಲಿ ಓಡಾಡಲು ಅನುಕೂಲವಾಗಿದ್ದ ರೈಲು ಪ್ರಯಾಣ ಸೌಲಭ್ಯ ಇದೀಗ ರೈತನ ಈ ಕೆಲಸದಿಂದ ಇದ್ದೂ ಇಲ್ಲದಂತಾಗಿದೆ. ರೈಲ್ವೆ ಇಲಾಖೆ ತನ್ನ ಭೂಮಿಯನ್ನು ನಾಗರಿಕ ಸೌಲಭ್ಯದ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡಿದ್ದು, ಪರಿಹಾರ ನೀಡಿಲ್ಲ ಎಂದು ರೈತ ಈಗಾಗಲೇ ತನ್ನ ಹೊಲದ ರಸ್ತೆಯನ್ನು ಮುಚ್ಚಿದ್ದಾನೆ. ಜನ ರೈಲ್ವೆ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಮೂಲಕ ಹೋಗುತಿದ್ದರು. ಇದೀಗ ಆ ರಸ್ತೆಯನ್ನೂ ರೈತ ಹಾಳು ಮಾಡಿದ್ದಾನೆ.

ಇದನ್ನೂ ಓದಿ: ವಿಜಯಪುರದಲ್ಲಿ ರಸ್ತೆ ದಾಟಲು ಹೋದ ವ್ಯಕ್ತಿಗೆ ವಾಹನ ಡಿಕ್ಕಿ- ಸ್ಥಳದಲ್ಲೇ ಸಾವು!

ಗ್ರಾಮದ ಯುವಕರು, ರಾಜಕೀಯ ಮುಖಂಡರು ರೈತನ ಮನವೊಲಿಸುವ ಯತ್ನ ನಡೆಸಿ ವಿಫಲರಾಗಿದ್ದಾರೆ. ಸಂಬಂಧಿತ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಇತ್ಯರ್ಥ ಮಾಡಿಕೊಡುವಂತೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.