ಗಂಗಾವತಿ: ವಿಧಾನಸಭಾ ಚುನಾವಣೆಗೆ ಗಂಗಾವತಿಯ ಅಖಾಡದಿಂದ ಸ್ಪರ್ಧಿಸಬೇಕಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ತಾವು ಸಲ್ಲಿಸಿದ್ದ ನಾಮಪತ್ರಕ್ಕೆ ಸಹಿ ಹಾಕುವುದನ್ನೇ ಮರೆತು ಎಡವಟ್ಟು ಮಾಡಿಕೊಂಡಿದ್ದಾರೆ. ಇದರ ಪರಿಣಾಮ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ.
ಪಕ್ಷೇತರ ಅಭ್ಯರ್ಥಿ ನಾಮಪತ್ರ ಅಸಿಂಧು: ದೇವಪ್ಪ ಎಂಬ ವ್ಯಕ್ತಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರಗಳ ಕ್ರಮಬದ್ಧತೆ ಪರಿಶೀಲಿಸುವ ಸಂದರ್ಭದಲ್ಲಿ ನಾಮಪತ್ರಕ್ಕೆ ಈ ವ್ಯಕ್ತಿ ಸಹಿ ಮಾಡದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅಧಿಕಾರಿಗಳು ನಾಮಪತ್ರ ಅಸಿಂಧುಗೊಳಿಸಿದ್ದಾರೆ. ಜೊತೆಗೆ ಗಂಗಾವತಿಯ ಅಖಾಡದಿಂದ ಸ್ಪರ್ಧೆ ಮಾಡಲು ಬಯಸಿದ್ದ ಬೆಂಗಳೂರು ಮೂಲದ ಗೀತಾ ಎಂಬುವವರು ತಮ್ಮ ವಿಳಾಸದ ದೃಢೀಕೃತ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆ, ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕಾರ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳಾ ಅಭ್ಯರ್ಥಿಗಳು ಗೆದ್ದಿರುವುದೆಷ್ಟು? ಪುರುಷರಿಗೆ ಸ್ಪರ್ಧೆಯೊಡ್ಡುವರೇ ವುಮನ್ ಕ್ಯಾಂಡಿಡೇಟ್ಸ್!
ಕ್ರಮಬದ್ಧವಾಗಿವೆ 31 ನಾಮಪತ್ರಗಳು: ಗಂಗಾವತಿಯಲ್ಲಿ ಒಟ್ಟು 33 ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ ಎರಡು ತಿರಸ್ಕೃತವಾಗಿವೆ. ಉಳಿದಂತೆ 31 ನಾಮಪತ್ರ ಕ್ರಮಬದ್ಧವಾಗಿವೆ. ಇದರಲ್ಲಿ ಓರ್ವ ಮಹಿಳೆ ಕಣದಲ್ಲಿ ಉಳಿದುಕೊಂಡಿದ್ದಾರೆ. ಎಂಟು ಜನ ಪಕ್ಷೇತರರರು ಸೇರಿದಂತೆ ಒಟ್ಟು 31 ನಾಮಪತ್ರಗಳು ಅಂಗೀಕಾರವಾಗಿವೆ.
ಚುನಾವಣಾ ಅಧಿಕಾರಿಗಳಿಂದ ದೂರು ದಾಖಲು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿನೆ ಮಾಡಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಆರೋಪದ ಅಡಿ ಏ.20ರಂದು ಮತ್ತೆರಡು ಪಕ್ಷಗಳ ಸ್ಥಳೀಯ ಅಧ್ಯಕ್ಷರ ಮೇಲೆ ಚುನಾವಣಾ ಅಧಿಕಾರಿಗಳು ದೂರು ದಾಖಲು ಮಾಡಿದ್ದಾರೆ. ನಗರದಲ್ಲಿ ಏ.19ರಂದು (ಬುಧವಾರ) ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಅವರ ಬೃಹತ್ ರೋಡ್ ಶೋ ಮಾಡಿದ್ದರು. ಈ ಸಮಯದಲ್ಲಿ 8ರಿಂದ 10ವರ್ಷದೊಳಗಿನ ಮಕ್ಕಳನ್ನು ಬಳಸಿಕೊಂಡು ಅವರಿಗೆ ಪಕ್ಷದ ಧ್ವಜ ಕೊಟ್ಟು, ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಕೊಪ್ಪಳದಲ್ಲಿ ತ್ರಿಕೋನ ಸ್ಪರ್ಧೆ: ಕುಟುಂಬ ರಾಜಕಾರಣಕ್ಕೆ ಬೀಳುತ್ತಾ ಕಡಿವಾಣ?
ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಸುದೇಶ ಕುಮಾರ ಆರೋಪ ಮಾಡಿದ್ದು, ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಕಾಯ್ದೆ 1986ರ ಅಡಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಮೋದಿ ಬ್ರಹ್ಮಾಸ್ತ್ರಗಳು ಕರ್ನಾಟಕದಲ್ಲಿ ಕೆಲಸ ಮಾಡುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ
ಇನ್ನೊಂದೆಡೆ ಕಡೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ನಡೆಸಿದ ರೋಡ್ ಶೋ ವೇಳೆಯಲ್ಲಿ 6ರಿಂದ 13ವರ್ಷದೊಳಗಿನ 15ರಿಂದ 20ಮಕ್ಕಳನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪದ ಹಿನ್ನೆಲೆ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶಾಮೀದ ಮನಿಯಾರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಅಜ್ಜ, ತಂದೆಯ ಗೆಲುವಿಗೆ ಬರಿಗಾಲಲ್ಲಿ ಮತಬೇಟೆ, ಕೆಂಡ ಹಾಯ್ದ ಸಮರ್ಥ್ ಶಾಮನೂರು
ಇದನ್ನೂ ಓದಿ: ಯಾರ ಡ್ಯಾಂನಲ್ಲಿ ಎಷ್ಟು ನೀರಿದೆ ಎಂದು ಫಲಿತಾಂಶದ ದಿನವೇ ಗೊತ್ತಾಗಲಿದೆ: ಡಿಕೆ ಶಿವಕುಮಾರ್ಗೆ ಸಿಎಂ ತಿರುಗೇಟು