ETV Bharat / state

ಕೊಪ್ಪಳ: 526 ಕೊರೊನಾ ಸೋಂಕಿತರು ಪತ್ತೆ, 8 ಮಂದಿ ಸಾವು

author img

By

Published : May 18, 2021, 9:50 AM IST

ಕೊಪ್ಪಳ ಜಿಲ್ಲೆಯಲ್ಲಿ ನಿನ್ನೆ ಪತ್ತೆಯಾದ ಕೋವಿಡ್‌ ಪ್ರಕರಣಗಳ ಮಾಹಿತಿ ಇಲ್ಲಿದೆ.

8 people died, 8 people died by covid. 8 people died by covid in Koppal, Koppal corona news, 8 ಜನ ಕೊರೊನಾ ಸೋಂಕಿತರು ಸಾವು, ಕೊಪ್ಪಳದಲ್ಲಿ 8 ಜನ ಕೊರೊನಾ ಸೋಂಕಿತರು ಸಾವು, ಕೊಪ್ಪಳ ಕೊರೊನಾ ಸುದ್ದಿ,
ಕೊಪ್ಪಳ ಜಿಲ್ಲೆಯಲ್ಲಿ 526 ಪಾಸಿಟಿವ್ ಪ್ರಕರಣ ಪತ್ತೆ

ಕೊಪ್ಪಳ: ಜಿಲ್ಲೆಯಲ್ಲಿ ನಿನ್ನೆ 526 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಎಂಟು ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

ಸೋಂಕಿತರ ತಾಲೂಕುವಾರು ವಿವರ:

ಕೊಪ್ಪಳ ತಾಲೂಕಿನಲ್ಲಿ 182, ಗಂಗಾವತಿ 215, ಕುಷ್ಟಗಿ 73 ಹಾಗೂ ಯಲಬುರ್ಗಾ ತಾಲೂಕಿನ 56 ಪ್ರಕರಣ ಸೇರಿ 526 ಕೋವಿಡ್​ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 25,921 ಸೋಂಕು ಪ್ರಕರಣಗಳು ದೃಢಪಟ್ಟಿವೆ. ನಿನ್ನೆ ಎಂಟು ಜನ ಸೋಂಕಿತರು ಸಾವನ್ನಪ್ಪಿದ್ದು ಈವರೆಗೆ ಒಟ್ಟು 432 ಮಂದಿ ಮಾರಕ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ನಿನ್ನೆ ಕೊರೊನಾದಿಂದ 276 ಜನರು ಗುಣಮುಖರಾಗಿದ್ದು, ಈವರೆಗೆ ಒಟ್ಟು 20,907 ಜನರು ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 4,582 ಸಕ್ರಿಯ ಪ್ರಕರಣಗಳಿದ್ದು, 3,931 ಸೋಂಕಿತರು ಹೋಂ ಐಸೋಲೇಷನ್​ನಲ್ಲಿದ್ದಾರೆ. 651 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.