ETV Bharat / state

ಕಾರಟಗಿ ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆ: 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ

ಇತ್ತೀಚೆಗೆ ಬೀಸಿದ ಬಿರುಗಾಳಿ ಹಾಗೂ ಅಕಾಲಿಕ ಆಲಿಕಲ್ಲು ಮಳೆಗೆ ಕಾರಟಗಿ ಹೋಬಳಿ ಹಾಗೂ ಸಿದ್ದಾಪುರದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

crop destroy due to rain
4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
author img

By

Published : May 5, 2021, 7:49 AM IST

ಗಂಗಾವತಿ: ಕಾರಟಗಿ ತಾಲೂಕಿನಲ್ಲಿ ಇತ್ತೀಚೆಗೆ ಬೀಸಿದ ಬಿರುಗಾಳಿ ಹಾಗೂ ಅಕಾಲಿಕ ಆಲಿಕಲ್ಲು ಮಳೆಗೆ 4 ಸಾವಿರ ಹzಕ್ಟರ್ ಪ್ರದೇಶದಲ್ಲಿನ ಭತ್ತದ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಪ್ರಾಥಮಿಕ ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.

ಗಂಗಾವತಿ ತಾಲೂಕಿನ ಬಹುತೇಕ ಭಾಗದಲ್ಲಿ ಆಗಲೆ ಕಟಾವು ಮುಗಿಸಿದ್ದರಿಂದ ಹೆಚ್ಚಿನ ಸಮಸ್ಯೆ ಆಗಿಲ್ಲ. ಆದರೆ ಕಾರಟಗಿ ಹೋಬಳಿ ಹಾಗೂ ಸಿದ್ದಾಪುರದಲ್ಲಿ ಭಾರೀ ನಷ್ಟ ಉಂಟಾಗಿದೆ. ಕಾರಟಗಿ ಹೋಬಳಿಯಲ್ಲಿ 467 ಹೆಕ್ಟೇರ್‌ ಪ್ರದೇಶದಲ್ಲಿ ಹಾಗೂ ಸಿದ್ದಾಪುರ ಹೋಬಳಿಯಲ್ಲಿ 3,657 ಹೆಕ್ಟೇರ್‌ ಪ್ರದೇಶದಲ್ಲಿನ ಭತ್ತದ ಬೆಳೆಗೆ ಹಾನಿಯಾಗಿದೆ. ಒಟ್ಟು 4124 ಹೆಕ್ಟೇರ್ ಪ್ರದೇಶದಲ್ಲಿನ ಭತ್ತ ನಾಶವಾಗಿದ್ದು, ಸುಮಾರು 40 ಲಕ್ಷ ರೂ. ಮೊತ್ತದಷ್ಟು ಬೆಳೆ ಹಾನಿಯಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕಾಟಾಪುರ ಕೆರೆಗೆ ಶಾಸಕ ಬಸವರಾಜ ದಢೇಸೂಗೂರು ಭೇಟಿ:

ಮೇ ಹಾಗೂ ಜೂನ್ ತಿಂಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸುವ ಉದ್ದೇಶಕ್ಕೆ ಶಾಸಕ ಬಸವರಾಜ ದಢೇಸೂಗೂರು ಕಾಟಾಪುರದ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು. ಕನಕಗಿರಿ ತಾಲೂಕಿನ ಕಾಟಾಪುರದಲ್ಲಿರುವ ಕೆರೆಯನ್ನು ಭರ್ತಿ ಮಾಡಿ ಅಲ್ಲಿಂದ ಕರಡೋಣಿ ಕೆರೆಗೆ ಪೈಪ್​ ಲೈನ್​ ಮೂಲಕ ನೀರು ಹಾಯಿಸಿ ಕೆರೆ ಭರ್ತಿ ಮಾಡುವ ಯೋಜನೆಯ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

Gangavathi
ಕಾಟಾಪುರದ ಕೆರೆಗೆ ಶಾಸಕ ಬಸವರಾಜ ದಢೇಸೂಗೂರು ಭೇಟಿ, ಪರಿಶೀಲನೆ

ಈ ಬಗ್ಗೆ ಮಾತನಾಡಿದ ಶಾಸಕರು, 2 ತಿಂಗಳಗಳ ಕಾಲ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕೆರೆಗೆ ನೀರು ಭರ್ತಿ ಮಾಡಿದರೆ ಅಂತರ್ಜಲ ವೃದ್ಧಿಯಾಗುವುದಲ್ಲದೇ, ಜನರಿಗೆ ಸುಲಭವಾಗಿ ನೀರು ತಲುಪಿಸಬಹುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.