ಕುಷ್ಟಗಿ (ಕೊಪ್ಪಳ): ದೇಶದಲ್ಲಿ ಹೆಲ್ಮೆಟ್ ಇಲ್ಲದೇ ಸಂಭವಿಸುವ ರಸ್ತೆ ಅಪಘಾತದಲ್ಲಿ ಗಂಟೆಗೆ ನಾಲ್ವರು ಸಾವನ್ನಪ್ಪುತ್ತಿದ್ದಾರೆ ಎಂದು ಅಗ್ನಿಶಾಮಕ ಠಾಣೆಯ ಅಧಿಕಾರಿ ಎನ್.ರಾಜು ಹೇಳಿದರು.
ಗೃಹರಕ್ಷಕ ದಳ ಘಟಕದಿಂದ ರಸ್ತೆ ಸುರಕ್ಷಾ ಸಪ್ತಾಹ ಹಿನ್ನೆಲೆಯಲ್ಲಿ ರಸ್ತೆ ಅಪಘಾತಗಳ ಕುರಿತ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ: ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದರೆ, ವಿಜಯೇಂದ್ರ RTGS ಗಿರಾಕಿ: ಸಿದ್ದರಾಮಯ್ಯ
ಇಷ್ಟೆಲ್ಲಾ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದರೂ ಜನರಲ್ಲಿ ಜಾಗೃತಿ ಮೂಡುತ್ತಿಲ್ಲ. ಹೆಲ್ಮೆಟ್ನಿಂದ ಶೇ.75 ಜೀವ ಉಳಿಸಿಕೊಳ್ಳಬಹುದಾಗಿದೆ. ಕೈ-ಕಾಲು ಮುರಿದರೆ ಜೀವನ ಸಾಗಿಸಬಹುದಾಗಿದೆ. ಅದೇ ಜೀವ ಹೋದರೆ, ಏನೂ ಸಾಧಿಸಲು ಸಾದ್ಯವಿಲ್ಲ ಎಂದರು.