ಕೊಪ್ಪಳ: ಜಿಲ್ಲೆಯಲ್ಲಿ ನಿನ್ನೆ 314 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆರು ಜನ ಸೋಂಕಿತರು ಸಾವನ್ನಪ್ಪಿದ್ದಾರೆ.
ತಾಲ್ಲೂಕುವಾರು ವಿವರ:
ಕೊಪ್ಪಳ ತಾಲೂಕಿನಲ್ಲಿ 69, ಗಂಗಾವತಿ 48, ಕುಷ್ಟಗಿ 47 ಹಾಗೂ ಯಲಬುರ್ಗಾ 149 ಪ್ರಕರಣ ಕಂಡುಬಂದಿದೆ. ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 18,592.
ಇಲ್ಲಿಯವರೆಗೆ ಮಹಾಮಾರಿಗೆ ಒಟ್ಟು 305 ಜನ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. 196 ಜನರು ಗುಣಮುಖರಾಗಿದ್ದು, ಈವರೆಗೆ ಒಟ್ಟು 15,250 ಜನರು ಚೇತರಿಕೆ ಕಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2,937 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 2,795 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ. ಉಳಿದಂತೆ 242 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕಲಬುರಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ನಾಲ್ವರು ಕೊರೊನಾ ಸೋಂಕಿತರು ಸಾವು: ಬೆಚ್ಚಿಬಿದ್ದ ಜನತೆ