ಗಂಗಾವತಿ : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಯೊಬ್ಬ ಇಡೀ ರಾಜ್ಯಕ್ಕೆ 5ನೇ ಟಾಪರ್ ಆಗುವ ಮೂಲಕ ಗಮನ ಸೆಳೆದಿದ್ದಾನೆ.
ಕಾಲೇಜಿನ ಅಲ್ಲಮಪ್ರಭು ಎಂಬ ವಿದ್ಯಾರ್ಥಿ 592 ಅಂಕ ಪಡೆದು ಕೊಪ್ಪಳಕ್ಕೆ ಮಾತ್ರವಲ್ಲ ಇಡೀ ಕಲ್ಯಾಣ ಕರ್ನಾಟಕಕ್ಕೆ ಟಾಪರ್ ಆಗಿದ್ದಾನೆ. ರಾಜ್ಯದಲ್ಲಿ 595 ಅತ್ಯಧಿಕ ಅಂಕವಾಗಿದೆ.

ಹತ್ತನೇ ತರಗತಿಯಲ್ಲಿ ಕೂಡ ಈ ವಿದ್ಯಾರ್ಥಿ 485 ಅಂಕ ಪಡೆದು ಹೈಕ ಭಾಗಕ್ಕೆ ಟಾಪರ್ ಆಗಿದ್ದ. ಇದೀಗ ದ್ವಿತೀಯ ಪಿಯುಸಿ ಕನ್ನಡದಲ್ಲಿ 98, ಇಂಗ್ಲಿಷ್ 95 ಅಂಕ ಪಡೆದರೆ, ಭೌತಶಾಸ್ತ್ರ, ರಸಾಯನ ಮತ್ತು ಜೀವಶಾಸ್ತ್ರದಲ್ಲಿ ತಲಾ 100 ಅಂಕ ಹಾಗೂ ಗಣಿತದಲ್ಲಿ 99 ಅಂಕ ಪಡೆದು ಒಟ್ಟು 600ಕ್ಕೆ 592 ಅಂಕ ಪಡೆಯುವ ಮೂಲಕ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾನೆ.
