ಕೊಪ್ಪಳ: ದುಡಿಯಲು ಮಂಗಳೂರಿಗೆ ಹೋಗಿದ್ದ 288 ಕಾರ್ಮಿಕರು ತವರು ಜಿಲ್ಲೆಗೆ ಮರಳಿದ್ದಾರೆ. ದೂರದೂರಿಂದ ಬಂದ ಕಾರ್ಮಿಕರಿಗೆ ಗವಿಮಠ ಸೇರಿದಂತೆ ಜಿಲ್ಲಾಡಳಿತದಿಂದ ಉಪಾಹಾರದ ವ್ಯವಸ್ಥೆ ಮಾಡಲಾಯಿತು.
ಕೊಪ್ಪಳ ತಾಲೂಕಿನ 39 ಜನ, ಯಲಬುರ್ಗಾ 10, ಕನಕಗಿರಿ 48, ಕುಷ್ಟಗಿ 149, ಗಂಗಾವತಿ ತಾಲೂಕಿನ 42 ಕಾರ್ಮಿಕರು ಜಿಲ್ಲೆಗೆ ಬಂದಿಳಿದರು. ಅವರನ್ನು ಬಸ್ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಿ ಅವರವರ ಊರಿಗೆ ಕಳಿಸಿಕೊಡಲಾಗುತ್ತಿದೆ.
ಬಸ್ ನಿಲ್ದಾಣದಲ್ಲಿ ಉಪಾಹಾರ ಪಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದದ್ದು ಕಂಡು ಬಂತು. ಅಂತರ ಕಾಯ್ದುಕೊಳ್ಳುವಂತೆ ಉಪವಿಭಾಗಾಧಿಕಾರಿ ಸಿ.ಡಿ.ಗೀತಾ ಅವರು ಮೈಕ್ ಮೂಲಕ ಮನವಿ ಮಾಡಿದರೂ ಸಹ ಕಾರ್ಮಿಕರು ಕ್ಯಾರೆ ಎನ್ನಲಿಲ್ಲ.