ETV Bharat / state

ಕದ್ದ 16 ಬೈಕ್​​​ಗಳು ಜಪ್ತಿ: ಕಳ್ಳತನದ ಬೈಕ್ ಖರೀದಿಸಿದವರ ಮೇಲೂ ಬಿತ್ತು ಕೇಸ್

author img

By

Published : Sep 1, 2021, 3:13 PM IST

ಬೈಕ್​ ಕಳ್ಳನನ್ನು ಬಂಧಿಸಿ 16 ಬೈಕ್​ಗಳನ್ನು ಸೀಜ್​ ಮಾಡಿರುವ ಕೊಪ್ಪಳ ಪೊಲೀಸರು, ಕಡಿಮೆ ಬೆಲೆಗೆ ಸಿಗುತ್ತೆ ಎಂದು ಕಳ್ಳತನದ ಬೈಕ್​ಗಳನ್ನು ಖರೀದಿಸಿದವರ ಮೇಲೆಯೂ ಕೇಸ್​ ದಾಖಲಿಸಿದ್ದಾರೆ.

16 bikes seized from bike thief
ಬೈಕ್ ಕಳ್ಳನಿಂದ 16 ಬೈಕ್​​​ಗಳ ಜಪ್ತಿ

ಕೊಪ್ಪಳ: ಬೈಕ್​​ಗಳನ್ನು ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಕಳ್ಳತನದ ಆರೋಪಿಯನ್ನು ಕೊಪ್ಪಳ ನಗರ ಠಾಣೆಯ ಪೊಲೀಸರು ಬಂಧಿಸಿ ಬರೋಬ್ಬರಿ 16 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ವಿಜಯನಗರ ಜಿಲ್ಲೆಯ ವೆಂಕಟಾಪುರ ಗ್ರಾಮದ ಕೆ. ಮಂಜುನಾಥ ಬಂಧಿತ ಆರೋಪಿ. ತನ್ನ ಸ್ನೇಹಿತನಾದ ಸಣ್ಣ ಬಸನಗೌಡನೊಂದಿಗೆ ಸೇರಿ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡಿ, ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ. ಕೊಪ್ಪಳ ನಗರದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿ ಸಿಕ್ಕಿಬಿದ್ದಿದ್ದು, ಕಳ್ಳತನ ಮಾಡಿರುವ ಕುರಿತು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಆರೋಪಿಯನ್ನು ಬಂಧಿಸಿ 16 ಬೈಕ್ ಬೈಕ್​​ಗಳನ್ನು ಜಪ್ತಿ ಮಾಡಲಾಗಿದೆ. ಇನ್ನೊಬ್ಬ ಆರೋಪಿಯನ್ನು ಹೊಸಪೇಟೆ ನಗರ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಕಳ್ಳತನದ ಬೈಕ್​ಗಳನ್ನು ಈತನಿಂದ ಕಡಿಮೆ ಬೆಲೆಗೆ ಖರೀದಿಸಿದವರನ್ನು ಆರೋಪಿಗಳೆಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಯಡಿಯೂರಪ್ಪ ಒಡೆತನದ ಶಿಕ್ಷಣ ಸಂಸ್ಥೆಗೆ ಸೇರಿದ ನಾಲ್ಕು ಬಸ್​ಗಳಿಂದ ಡೀಸೆಲ್ ಕಳ್ಳತನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.