ETV Bharat / state

ದಾಳಿಯ ನಂತರ ಎಚ್ಚೆತ್ತ ವಿಸ್ಟ್ರಾನ್:​ ಷರತ್ತುಗಳ ಮೇಲೆ ನೇಮಕಾತಿ ಪ್ರಕ್ರಿಯೆ ಆರಂಭ

ಕಂಪನಿ ಉದ್ಯೋಗಿಗಳ ದಾಂಧಲೆಯ ನಂತರ ಎಚ್ಚೆತ್ತುಕೊಂಡಿರುವ ಐಫೋನ್‌ ತಯಾರಿಕಾ ಕಂಪನಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

wistron-iphone-company-started-the-recruitment-process-on-conditional-terms
ವಿಸ್ಟ್ರಾನ್
author img

By

Published : Jan 19, 2021, 9:34 PM IST

ಕೋಲಾರ: ಸಂಘರ್ಷದ ಒಂದು ತಿಂಗಳ ನಂತರ ಪ್ರತಿಷ್ಠಿತ ಐಫೋನ್​ ತಯಾರಿಕಾ ಕಂಪನಿ ವಿಸ್ಟ್ರಾನ್​ ತನ್ನ ಕಾರ್ಮಿಕರಿಗೆ ಬಾಕಿ ಇದ್ದ ವೇತನ ಪಾವತಿಸಿ, ಮತ್ತೆ ಸಿಬ್ಬಂದಿ ನೇಮಕಾತಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೆಲವು ಷರತ್ತುಗಳನ್ನೂ ಹಾಕಿದೆ.

ಡಿಸೆಂಬರ್​-12 ರಂದು ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಐಫೋನ್​ ತಯಾರಿಕಾ ಕಂಪನಿ ವಿಸ್ಟ್ರಾನ್​ ಮೇಲೆ ಅಲ್ಲಿನ ಕಾರ್ಮಿಕರು ದಾಂಧಲೆ ನಡೆಸಿ ಕಂಪನಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದ್ದರು. ಸರಿಯಾಗಿ ವೇತನ ನೀಡದಿರೋದು ಮತ್ತು ಹೆಚ್ಚಿನ ಕೆಲಸದ ಅವಧಿ ಕಾರ್ಮಿಕರ ಕೋಪಕ್ಕೆ ಕಾರಣವಾಗಿತ್ತು.

ಇದಾದ ನಂತರ ಹಲವು ತನಿಖೆಗಳು, ಪರಿಶೀಲನೆಯ ಬಳಿಕ ಕಂಪನಿ ಕಾರ್ಮಿಕರ ಕ್ಷಮೆ ಕೇಳಿ ತನ್ನ ತಪ್ಪುಗಳನ್ನು ಒಪ್ಪಿಕೊಂಡಿತ್ತು. ಇದರ ನಡುವೆ ವಿಸ್ಟ್ರಾನ್​ ಮತ್ತೆ ಇಲ್ಲಿ ಕಾರ್ಯಾರಂಭ ಮಾಡೋದು ಅನುಮಾನ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬಂದಿದ್ದವು.

ಇದನ್ನೂ ಓದಿ: 116 ಎಕ್ರೆ ಜಮೀನು ದಾನ ಮಾಡಿ 4 ಬಾರಿ ಶಾಸಕನಾದ ವೃದ್ಧನಿಗೆ ತಲೆ ಮೇಲೊಂದು ಸೂರಿಲ್ಲ!

ಸದ್ಯ ಇದೆಲ್ಲದಕ್ಕೂ ತೆರೆ ಎಳೆದಿರುವ ಕಂಪನಿ, ಈಗಾಗಲೇ ಕಾರ್ಮಿಕರ ಬಾಕಿಯಿದ್ದ ವೇತನ ಪಾವತಿಸಿದೆ. ಜೊತೆಗೆ ದಾಂಧಲೆಯಲ್ಲಿ ಭಾಗಿಯಾಗಿದ್ದ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿದೆ.

ವಿಸ್ಟ್ರಾನ್​ ಷರತ್ತುಗಳೇನು?

  • ಗುರುತಿನ ದಾಖಲೆ ಸಹಿತ ಅಭ್ಯರ್ಥಿ ವಾಸಿಸುವ ಗ್ರಾಮದ ಇಬ್ಬರು ಸಾಕ್ಷಿಗಳು.
  • ಆಧಾರ್​ ಕಾರ್ಡ್, ಪ್ಯಾನ್ ಕಾರ್ಡ್​, ವಿದ್ಯಾರ್ಹತೆ ದಾಖಲಾತಿಗಳು ಹಾಗೂ ಮೂರು ಪೋಟೋ.
  • ಸೇವಾಸಿಂಧು ಅಥವಾ ಕಂಪನಿಯ ಆ್ಯಪ್​​​ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.

ಇಷ್ಟು ದಾಖಲಾತಿಗಳೊಂದಿಗೆ ಪೊಲೀಸ್​ ಠಾಣೆಯಲ್ಲಿ ಪಡೆಯುವ ನಿರಪೇಕ್ಷಣಾ ಪತ್ರ ಪಡೆದವರಿಗೆ ಮಾತ್ರ ಕಂಪನಿಯಲ್ಲಿ ಉದ್ಯೋಗ ಸಿಗಲಿದೆ. ಇಂದಿನಿಂದ ಈ ಪ್ರಕ್ರಿಯೆ ಆರಂಭವಾಗಿದ್ದು, ದಾಖಲಾತಿ ಪರಿಶೀಲನಾ ಪ್ರಕ್ರಿಯೆ ಶುರುವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.