ETV Bharat / state

ಗಂಡ ಬೇಕು ಗಂಡ... ಪತಿ ಮನೆ ಮುಂದೆ ಧರಣಿ ಕುಳಿತ ಪತ್ನಿ! - ಗಂಡ ಬೇಕು ಗಂಡ

ಕೋಲಾರ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಂತರ್ಜಾತಿ ಮದುವೆ ಆಗಿದ್ದ ವ್ಯಕ್ತಿವೋರ್ವ ಈಗ ಆಕೆಗೆ ಕೈಕೊಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ಮಹಿಳೆ ಪತಿ ಮನೆಯ ಮುಂದೆ ಧರಣಿ ಕುಳಿತಿದ್ದಾಳೆ.

ಗಂಡ ಬೇಕೆಂದು ಪತಿ ಮನೆ ಮುಂದೆ ಧರಣಿ ಕೂತ ಪತ್ನಿ

author img

By

Published : Jan 13, 2021, 7:13 PM IST

ಕೋಲಾರ: ಅವರಿಬ್ಬರು ಪ್ರೀತಿಸಿ ಮದುವೆ ಆಗಿದ್ರು. ಯಾರ ಸಹವಾಸವೂ ಬೇಡ ಅಂತ ಊರು ಬಿಟ್ಟು ದೂರದ ಮೈಸೂರಿನಲ್ಲಿ ಜೊತೆಯಾಗಿ ಸಂಸಾರ ಸಹ ಮಾಡ್ತಿದ್ರು. ಇದೀಗ ದಿಢೀರನೇ ಪತಿರಾಯ ಎಸ್ಕೇಪ್ ಆಗಿದ್ದು, ಮದುವೆ ಆದ ತಪ್ಪಿಗೆ ಹೆಂಡತಿ ಗಂಡನಿಗಾಗಿ ಆತನ ಮನೆ ಎದುರು ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾಳೆ.

ಗಂಡ ಬೇಕೆಂದು ಪತಿ ಮನೆ ಮುಂದೆ ಧರಣಿ ಕೂತ ಪತ್ನಿ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ ಯುವತಿ ಮದುವೆಯಾಗಿರುವ ಫೋಟೋದೊಂದಿಗೆ ಪತಿರಾಯನ ಮನೆ ಎದುರು ಏಕಾಂಗಿ ಹೋರಾಟ ನಡೆಸುತ್ತಿದ್ದಾಳೆ. ಮಾಲೂರು ಸುತ್ತಮತ್ತ ಗಾರೆ ಕೆಲಸ ಮಾಡುತ್ತಿದ್ದ ಮಂಜುನಾಥ್, ಯುವತಿಯನ್ನು ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗ್ತಿದೆ. ಅನ್ಯ ಜಾತಿ ಆದ್ರೂ ಪರವಾಗಿಲ್ಲ, ನಿನ್ನನ್ನೇ ಮದುವೆ ಆಗ್ತೀನಿ ಅಂತ ಮೂರು ವರ್ಷ ಪ್ರೀತಿಸಿ, ಕೊನೆಗೆ ನಮಗೆ ಯಾರು ಬೇಡ ಕೆಲ ದಿನಗಳ ಕಾಲ ದೂರ ಇರೋಣ ಅಂತ ಹೇಳಿ ದಾಂಪತ್ಯ ಆರಂಭಿಸಿದ್ದನಂತೆ. ಬಳಿಕ ಇಬ್ಬರೂ ಮೈಸೂರಿನಲ್ಲಿ‌ ಒಂದು ವರ್ಷ ಜೀವನ‌ ಸಾಗಿಸಿದ್ದಾರೆ. ಒಂದು ವರ್ಷದ ನಂತರ ಊರಿಗೆ ಬಂದ‌ ಮಂಜುನಾಥ್ ದಿಢೀರನೇ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಆತಂಕಕ್ಕೊಳಗಾದ ಸಂತ್ರಸ್ತೆ ನನಗೆ ನನ್ನ ಗಂಡ ಬೇಕು, ಅವರ ಪೋಷಕರು ಆತನನ್ನ ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಮನೆ ಮುಂದೆ ಪ್ರತಿಭಟಿಸುತ್ತಿದ್ದಾಳೆ.

ಓದಿ:ಪುತ್ತೂರಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ.. ವಿಡಿಯೋ ವೈರಲ್​

ಮಂಜುನಾಥ್ ಮನೆಯವರು ಮಾತ್ರ ಈಕೆಯನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ನನಗೆ ನನ್ನ ಗಂಡ ಬೇಕು ಇಲ್ಲಾಂದ್ರೆ ಇಲ್ಲಿಂದ ಹೋಗೋದಿಲ್ಲ ಅಂತ ಮನೆ ಮುಂದೆಯೇ ಮಹಿಳೆ ಪ್ರತಿಭಟನೆ ಆರಂಭಿಸಿದ್ದಾಳೆ. ನನಗೆ‌ ನ್ಯಾಯ ಸಿಗುವರೆಗೂ ಇಲ್ಲಿಂದ ಹೋಗುವುದಿಲ್ಲವೆಂದು ಪಟ್ಟು ಹಿಡಿದು ಎರಡು ದಿನಗಳಿಂದ‌‌ ಗಂಡನ ಮನೆ‌ ಮುಂದೆ ಧರಣಿ‌ ನಡೆಸುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ‌ ಕೈಗೊಂಡಿಲ್ಲವೆಂದು ಆರೋಪಿಸಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.