ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ನಂತರ, ವರ್ತೂರ್ ಪ್ರಕಾಶ್ ಸುತ್ತಮುತ್ತ ಬೌನ್ಸರ್ಗಳ ಹವಾ ಶುರುವಾಗಿದೆ. ಒಬ್ಬರಲ್ಲ ಇಬ್ಬರಲ್ಲ ಅಂತ ಆರಕ್ಕೂ ಹೆಚ್ಚು ಮಂದಿ ಬೌನ್ಸರ್ಗಳು ವರ್ತೂರ್ ಪ್ರಕಾಶ್ ಅವರಿಗೆ ಭದ್ರತೆ ನೀಡುತ್ತಿದ್ದಾರೆ.
ಇನ್ನು ಸರ್ಕಾರವೇ ಓರ್ವ ಗನ್ಮೆನ್ ನೀಡುವ ಮೂಲಕ ಭದ್ರತೆ ನೀಡಿದೆ. ಆದರೂ ವರ್ತೂರು ಪ್ರಕಾಶ್ ತಮ್ಮ ಭದ್ರತೆ ಹೆಚ್ಚಿಸಿಕೊಂಡಿದ್ದಾರೆ. ಆರು ಮಂದಿ ಬೌನ್ಸರ್ಗಳನ್ನು ನೇಮಿಸಿಕೊಂಡಿರುವ ವರ್ತೂರು ಪ್ರಕಾಶ್, ಬೌನ್ಸರ್ಗಳಿಗಾಗಿ ಖಾಸಗಿ ಎಸ್ಕಾರ್ಟ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಈ ಹಿಂದೆ ಹಣಕ್ಕಾಗಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರನ್ನ ಕಿಡ್ನಾಪ್ ಮಾಡಿ, ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಜೊತೆಗೆ ಕಿಡ್ನಾಪ್ ಮಾಡಿದ್ದ ವಿಚಾರ ಯಾರಿಗಾದರೂ ತಿಳಿಸಿದರೆ, ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಲಾಗಿತ್ತು. ಇದಾದ ನಂತರ ಕಿಡ್ನಾಪ್ ಕೇಸ್ನ ಆರೋಪಿಗಳನ್ನ ಪೊಲೀಸರು ಈಗಾಗಲೆ ಬಂಧಿಸಿದ್ದಾರೆ.
ಕಿಡ್ನಾಪ್ ಮಾಹಿತಿ ನೀಡಿದ್ರೆ, ನನಗೆ ಹಾಗೂ ನನ್ನ ಮಕ್ಕಳನ್ನ ಕೊಲೆ ಮಾಡುವ ಬೆದರಿಕೆಯನ್ನ ಹಾಕಿದ್ದಾರೆ ಎಂದು ಸ್ವತಃ ವರ್ತೂರು ಪ್ರಕಾಶ್ ಹೇಳಿಕೊಂಡಿದ್ದರು. ಹೀಗಾಗಿ ಪ್ರಾಣ ಭಯದಿಂದಾಗಿ ವರ್ತೂರು ತಮ್ಮ ಭದ್ರತೆಯನ್ನು ಸ್ವತಃ ಹೆಚ್ಚಿಸಿಕೊಂಡಿದ್ದಾರೆ. ಪಂಜಾಬ್ ಮೂಲದ ಬೌನ್ಸರ್ಗಳ ಪಹರೆಯಲ್ಲಿ ವರ್ತೂರು ಹವಾ ಮುಂದುವರೆದಿದೆ.