ಕೋಲಾರ: ಬೆಂಗಳೂರಿನ ನಿವಾಸಿ ಕಮಲ್ ಎಂಬಾತನ ತಂಡ ಬಾಲಕನನ್ನು ಕಿಡ್ನಾಪ್ ಮಾಡಿದ್ದು, ಅದಕ್ಕೆ ಸಹಾಯ ಮಾಡಿದ ಮಾಲೂರಿನ ಕೂರ್ನ ಹೊಸಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಮಹೇಶ್ ಎಂಬುವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೂಲದ ಕಮಲ್ ಎಂಬಾತ ಮಂಜುನಾಥ್ ಹಾಗೂ ಮಹೇಶ್‌ಗೆ ಪರಿಚಯವಾಗಿದ್ದರು. ನಿನ್ನೆ ಸಂಜೆ ಮಂಜುನಾಥನಿಗೆ ಕರೆ ಮಾಡಿದ್ದ ಕಮಲ್, ಸ್ನೇಹಿತರೊಂದಿಗೆ ಟ್ರಿಪ್ ಬಂದಿರೋದಾಗಿ ಮಹೇಶ್ ಮತ್ತು ಮಂಜುನಾಥ್ ನನಗೆ ಸುಳ್ಳು ಹೇಳಿದ್ದಾಗಿ ಮಹೇಶ್ ಪತ್ನಿ ಸುನೀತಾ ತಿಳಿಸಿದ್ದಾರೆ.
ಓದಿ: ಉಜಿರೆ ಬಾಲಕ ಕಿಡ್ನಾಪ್ ಪ್ರಕರಣ : ಆರೋಪಿಗಳು ಅಂದರ್
ಅಲ್ಲದೆ ಮನೆಗೆ ಬಂದು ಊಟ ಮುಗಿಸಿ ಇಲ್ಲೇ ಇದ್ದು ಬೆಳಗ್ಗೆ ಹೋಗ್ತಿವಿ ಅಂತ ಮಲಗಿದ್ದವರನ್ನು ಬೆಳಗ್ಗೆ ಪೊಲೀಸರು ಬಂಧಿಸಿದ ವೇಳೆ ಬಾಲಕನ ಕಿಡ್ನಾಪ್ ವಿಚಾರ ನಮ್ಮ ಗಮನಕ್ಕೆ ಬಂದಿದೆ. ರಾತ್ರಿ ಮಗು ಯಾರದ್ದು? ಎಂದು ಕಮಲ್‌ನನ್ನು ಕೇಳಿದಾಗ, ನಮ್ಮ ಅಕ್ಕನ ಮಗ ಎಂದು ಹೇಳಿದ್ದಾನೆ. ಅಲ್ಲದೆ ಬಾಲಕನೂ ಸಹ ಕಮಲ್‌ನನ್ನು ಮಾವ ಅಂತ ಹೇಳಿದ್ದಾನೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಲಾಗಿದ್ದ ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕಿಡ್ನಾಪ್ ಆದ ಉಜಿರೆ ಮೂಲದ ಅನುಭವ್ ಎಂಬ ಬಾಲಕನನ್ನು ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನ ಹೊಸಹಳ್ಳಿ ಗ್ರಾಮದಲ್ಲಿ ಪೊಲೀಸರು ರಕ್ಷಿಸಿದ್ದಾರೆ.