ಮಂಗಳೂರು: ಗುರುವಾರ ಸಂಜೆ ಬೆಳ್ತಂಗಡಿಯ ಉಜಿರೆ ರಥಬೀದಿಯಿಂದ ಬಾಲಕನನ್ನು ಅಪಹರಣ ಮಾಡಿದ್ದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಬಾಲಕ ಪಾಲಕರ ಮಡಿಲು ಸೇರಿದ್ದಾನೆ.
ಮಂಗಳೂರಿನಲ್ಲಿ ಕಿಡ್ನಾಪ್ ಆಗಿದ್ದ ಬಾಲಕನನ್ನು ಕೋಲಾರದಲ್ಲಿ ಪೊಲೀಸರು ರಕ್ಷಣೆ ಮಾಡಿದ್ದು, ಬಾಲಕ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದ್ದಾನೆ. ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ 8 ವರ್ಷದ ಬಾಲಕನ್ನು ಪೊಲೀಸರು ತಂದೆ-ತಾಯಿಗೆ ಒಪ್ಪಿಸಿದರು. ಈ ವೇಳೆ ಮಗ ಅಭಿನವ್ ನನ್ನು ಅಪ್ಪಿಕೊಂಡು ಪೋಷಕರು ಭಾವೋದ್ವೇಗಕ್ಕೆ ಒಳಗಾದ ದೃಶ್ಯ ಕಂಡುಬಂದಿತು.
ಕೋಲಾರದ ಎಸ್ಪಿ ಕಾರ್ತಿಕ್ ರೆಡ್ಡಿ ನೆರವಿನಿಂದ ಮಂಗಳೂರು ಪೊಲೀಸ್ ವಿಶೇಷ ತಂಡ ಈ ಪ್ರಕರಣವನ್ನು ಬೇಧಿಸಿದ್ದು, ಕಿಡ್ನಾಪರ್ಸ್ಗಳನ್ನು ಬಂಧಿಸಲಾಗಿದೆ. ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಎಂಬುವರ ಮನೆಯಲ್ಲಿ ಮಗುವನ್ನು ಇರಿಸಿದ್ದ ಅಪಹರಣಕಾರರು, ಮಗುವಿನ ಪೋಷಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಓದಿ: ಉಜಿರೆ ಬಾಲಕನ ಅಪಹರಣ ಕೇಸ್; 17 ಕೋಟಿಗೆ ಬೇಡಿಕೆ ಇಟ್ರಾ ಕಿಡ್ನಾಪರ್ಸ್?