ETV Bharat / state

ರೈತರೇ ಇಲ್ಲದ ಕಾರ್ಯಕ್ರಮದಲ್ಲಿ ರೈತನಾದ ಕೃಷಿ ಸಚಿವ ಬಿ.ಸಿ.ಪಾಟೀಲ!

ಇಡೀ ದಿನದ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಅಧಿಕಾರಿಗಳು ಕೇವಲ ಕೃಷಿ ಚಟುವಟಿಕೆಗಳನ್ನು ಮಾಡಿದ್ದಾರೆ. ಆದರೆ, ಇಲ್ಲಿ ಯಾವ ರೈತರು ಭಾಗಿಯಾಗದಿದ್ದದ್ದು ಮಾತ್ರ ಹಾಸ್ಯಾಸ್ಪದವಾಗಿತ್ತು.

There is no farmers participated in Ratrige Ondu Dina programme
ರೈತರಿಲ್ಲದ 'ರೈತರೊಂದಿಗೊಂದು ದಿನ
author img

By

Published : Jan 6, 2021, 7:23 PM IST

Updated : Jan 6, 2021, 9:48 PM IST

ಕೋಲಾರ : ರೈತರೊಂದಿಗೊಂದು ದಿನ ಅನ್ನೋ ಕಾರ್ಯಕ್ರಮದಲ್ಲಿ ಕೃಷಿ ಸಚಿವರು ಭಾಗಿಯಾಗಿ ಕಾರ್ಯಕ್ರಮವನ್ನೇನೋ ಯಶಸ್ವಿಗೊಳಿಸಿದ್ದಾರೆ. ಆದರೆ, ಅದರಲ್ಲಿ ರೈತರು ಮಾತ್ರ ಇರಲೇ ಇಲ್ಲ.

ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್​, ಬೇವಹಳ್ಳಿ ಗ್ರಾಮದ ಅಶ್ವಥಮ್ಮ ಅನ್ನೋರ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ವೀಕ್ಷಣೆ ಮಾಡಿದರು. ನಂತರ ಕಣದಲ್ಲಿ ರಾಶಿ ಪೂಜೆ ಮಾಡಿ, ಚಾಪರ್​ನಿಂದ ಮೇವು ಕತ್ತರಿಸಿ, ಹಸುವಿನಲ್ಲಿ ಹಾಲು ಕರೆದು, ಬೀಜ ಬಿತ್ತನೆ ಮಾಡಿ, ಗೊಬ್ಬರ ಹಾಕಿ, ಹೊಲ ಉಳುಮೆ ಮಾಡಿ ಬಿತ್ತನೆ ಮಾಡಿ, ಔಷಧಿ ಸಿಂಪಡನೆ, ಟೊಮ್ಯಾಟೊ ಗಿಡ ನಾಟಿ ಮಾಡಿ, ಆಲೂಗಡ್ಡೆ ಬೀಜ ಬಿತ್ತನೆ ಹೀಗೆ ಹತ್ತಾರು ಪ್ರಯೋಗಗಳನ್ನು ಮಾಡಿ ಗಮನ ಸೆಳೆದರು.

ಇಡೀ ದಿನದ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಅಧಿಕಾರಿಗಳು ಕೇವಲ ಕೃಷಿ ಚಟುವಟಿಕೆಗಳನ್ನು ಮಾಡಿದ್ದಾರೆ. ಆದರೆ, ಇಲ್ಲಿ ಯಾವ ರೈತರು ಭಾಗಿಯಾಗದಿದ್ದದ್ದು ಮಾತ್ರ ಹಾಸ್ಯಾಸ್ಪದವಾಗಿತ್ತು. ಸಚಿವರು ಬಂದಿರುವುದಕ್ಕೆ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ, ಬೇವಹಳ್ಳಿಯಲ್ಲಿ ಅದ್ದೂರಿ ಅಲಂಕಾರ, ನೂರಾರು ಮಹಿಳೆಯರು ಕಳಶ ಹೊತ್ತು ಮೆರವಣಿಗೆ, ಎತ್ತಿನಗಾಡಿ ಮೆರವಣಿಗೆ, ಜಾನಪದ ಕಲಾ ತಂಡಗಳಿಂದ ಮೆರವಣಿಗೆ, ಹೀಗೆ ಹಲವು ಕಾರ್ಯಕ್ರಮಗನ್ನು ಆಯೋಜನೆ ಮಾಡಿ ಇಡೀ ಕಾರ್ಯಕ್ರಮ ಕೇವಲ ಕೃಷಿ ಸಚಿವರಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ಸಿದ್ಧವಾಗಿದ್ದ ರಂಗ ವೇದಿಕೆಯಂತೆ ಕಾಣುತ್ತಿತ್ತು.

ರೈತರಿಲ್ಲದ 'ರೈತರೊಂದಿಗೊಂದು ದಿನ'

ಪ್ರಮುಖ ವಿಷಯ ಅಂದರೆ ಯಾರೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡರು. ಇದೇ ವೇಳೆ ವೇದಿಕೆಯಲ್ಲಿದ್ದ ಮಾಲೂರು ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಇದೊಂದು ದುಂದು ವೆಚ್ಚದ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ರೈತರಿಗೆ ಅನುಕೂಲಕರ ಯೋಜನೆಗಳನ್ನು ಜಾರಿಗೆ ತರಬೇಕು ಎಂದರು.

ಚಿತ್ರರಂಗದಲ್ಲಿ ಮಿಂಚಿದ್ದ ಸಚಿವ ಬಿ ಸಿ ಪಾಟೀಲರ ಈ ಕಾರ್ಯಕ್ರಮದಿಂದ ಯಾರಿಗೆ ಏನು ಅನುಕೂಲವಾಯ್ತು ಗೊತ್ತಿಲ್ಲ. ಆದ್ರೆ, ಸಚಿವರಿಗೆ ಮಾತ್ರ ರೈತರು ಮಾಡುವ ಕೆಲಸಗಳನ್ನು ಒಂದು ರಿಹರ್ಸಲ್​ ಮಾಡೋದಕ್ಕೆ ವೇದಿಕೆ ಸಿಕ್ಕಂತಾಗಿದ್ದು ಮಾತ್ರ ಸುಳ್ಳಲ್ಲ.

Last Updated : Jan 6, 2021, 9:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.