ETV Bharat / state

ಕೋಲಾರದಲ್ಲಿ ಕಳ್ಳರ ಕೈಚಳಕ: ಕಾಂಪ್ಲೆಕ್ಸ್​​​ನಲ್ಲಿದ್ದ ಅಂಗಡಿಗಳ ಬೀಗ ಮುರಿದು ಕಳ್ಳತನ - Kolar Theft of shops News

ಮೆಡಿಕಲ್ ಸ್ಟೋರ್, ಡೆಂಟಲ್ ಕ್ಲಿನಿಕ್, ಟೈಲರ್ ಅಂಗಡಿ, ಫೈನಾನ್ಸ್ ಆಫೀಸ್ ಸೇರಿದಂತೆ ಎಂಟು ಅಂಗಡಿಗಳಲ್ಲಿ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.

ಕಾಂಪ್ಲೆಕ್ಸ್ ನಲ್ಲಿದ್ದ ಅಂಗಡಿಗಳ ಬೀಗ ಮುರಿದು ಕಳ್ಳತನ

author img

By

Published : Aug 24, 2020, 9:04 AM IST

ಕೋಲಾರ: ನಗರದಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಜನರಲ್ಲಿ ಆತಂಕ ಮೂಡಿದೆ. ಕಳೆದ ರಾತ್ರಿ ನಗರದ ಅರ್ಬನ್ ಬ್ಯಾಂಕ್ ಕಾಂಪ್ಲೆಕ್ಸ್​​​ನಲ್ಲಿ ಸರಣಿ ಕಳ್ಳತನವಾಗಿದ್ದು, ಕಾಂಪ್ಲೆಕ್ಸ್​​​ನಲ್ಲಿದ್ದ ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ.

ಮೆಡಿಕಲ್ ಸ್ಟೋರ್, ಡೆಂಟಲ್ ಕ್ಲಿನಿಕ್, ಟೈಲರ್ ಅಂಗಡಿ, ಫೈನಾನ್ಸ್ ಆಫೀಸ್ ಸೇರಿದಂತೆ ಎಂಟು ಅಂಗಡಿಗಳಲ್ಲಿ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.

ಕಾಂಪ್ಲೆಕ್ಸ್​​​ನಲ್ಲಿದ್ದ ಅಂಗಡಿಗಳ ಬೀಗ ಮುರಿದು ಕಳ್ಳತನ

ಅಂಗಡಿಗಳಲ್ಲಿ ಇದ್ದ ಸುಮಾರು 50 ಸಾವಿರ ರೂ. ನಗದನ್ನ ದೋಚಿರುವ ಕಳ್ಳರು, ಅಂಗಡಿಗಳಲ್ಲಿದ್ದ ಕೆಲ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇತ್ತೀಚೆಗಷ್ಟೇ ನಗರದ ಜಯನಗರದ ಒಂದು ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ‌ನಗನಾಣ್ಯ ದೋಚಿ ಕಳ್ಳರು ಪರಾರಿಯಾಗಿದ್ದು, ಆ ಪ್ರಕರಣ ಭೇದಿಸುವ ಮೊದಲೇ ಮತ್ತೆ ಕಳ್ಳತನ ನಡೆದಿದ್ದು ನಗರದ ಜನರ ನಿದ್ದೆಗೆಡಿಸಿದೆ.

ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಆದಷ್ಟು ಬೇಗ ಕಳ್ಳರನ್ನು ಹಿಡಿಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.