ಕೋಲಾರ : ಮಾತಿಗೆ ಮಾತು, ಅದೇ ಮಾತು ವಿಕೋಪಕ್ಕೆ ಹೋಗಿತ್ತು. ಮಾತಾಡ್ತಾನೆ ಜಗಳವಾಡಿಕೊಂಡಿದ್ದರು. ಕೊನೆಗೆ ಒಬ್ಬ ಕುಡುಕ ಇನ್ನೊಬ್ಬ ಕುಡುಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರೋ ಘಟನೆ ಜಿಲ್ಲೆಯ ಕೋಲಾರ ತಾಲೂಕಿನ ಮದ್ದೇರಿ ಮಲ್ಲಂಡಹಳ್ಳಿಯಲ್ಲಿ ನಡೆದಿದೆ.
ಇದೇ ಗ್ರಾಮದ ಗೋಪಾಲ್ (40) ಎಂಬಾತ ಕೊಲೆಯಾಗಿದ್ದಾನೆ. ನಿನ್ನೆ ಮಧ್ಯರಾತ್ರಿ ಗೋಪಾಲ್ ಹಾಗೂ ನಾಗೇಶ್ ಎಂಬುವರು ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡಿದ್ದಾರೆ. ನಂತರ ಗೋಪಾಲ್ನ ತಲೆಯ ಮೇಲೆ ನಾಗೇಶ್ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿರುವ ನಾಗೇಶ್ ಅಲಿಯಾಸ್ ಜಿಂಕೆ ಬಾಬು ಪರಾರಿಯಾಗಿದ್ದ. ಆದರೆ, ವೇಮಗಲ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿ ನಾಗೇಶ್ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.