ಕೋಲಾರ : ಪೊಲೀಸರ ಭದ್ರತೆಯ ಮಧ್ಯೆಯೂ ಕೆಎಸ್ಆರ್ಟಿಸಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ತಾಲೂಕಿನ ತಂಬಿಹಳ್ಳಿ ಗೇಟ್ ಬಳಿ ಜರುಗಿದೆ.
ಕೋಲಾರದಿಂದ ಮುಳಬಾಗಿಲಿಗೆ ಹೋಗಿ ವಾಪಸ್ ಬರುವ ವೇಳೆ, ಮಾರ್ಗ ಮಧ್ಯೆ ತಂಬಿಹಳ್ಳಿ ಗೇಟ್ ಬಳಿ ಬಸ್ ಮೇಲೆ ಕಲ್ಲು ಎಸೆಯಲಾಗಿದೆ. ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಸಂಚಾರ ಆರಂಭವಾಗಿದ್ದರೂ ಸಹ , ಪೊಲೀಸ್ ಭದ್ರತೆಯ ನಡುವೆಯೂ ಬಸ್ನ ಮುಂಭಾಗದ ಗಾಜಿಗೆ ಕಿಡಿಗೇಡಿಗಳು ಕಲ್ಲನ್ನೆಸೆದಿದ್ದಾರೆ. ಇದರಿಂದ ಬಸ್ನ ಮುಂಬಾಗದ ಗಾಜಿಗೆ ಹಾನಿಯಾಗಿದೆ.
ಇನ್ನು ಮುಳಬಾಗಿಲು ಡಿಪೋಗೆ ಸೇರಿದ ಬಸ್ ಇದಾಗಿದ್ದು, ಕಳೆದ ಹತ್ತು ದಿನದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡದೆ, ಕೆಲ ನೌಕರರು ಕೆಲಸಕ್ಕೆ ಹಾಜರಾಗಿದ್ದರು. ಜೊತೆಗೆ ಮುಷ್ಕರ ಕೈ ಬಿಟ್ಟು ಬಸ್ ಓಡಿಸುತ್ತಿರುವುದನ್ನು ಖಂಡಿಸಿ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.