ಕೋಲಾರ: ಸಚಿವರೊಂದಿಗೆ ಬರುವ ಅವಶ್ಯಕತೆ ಇಲ್ಲದೆ ಇದ್ದರೂ, ಸಚಿವರೊಂದಿಗೆ ಬಂದ ಸಂಸದರು ಕ್ರಷರ್ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದರೊಂದಿಗೆ ರಾಜಕೀಯ ಮಾಡಲು ಮುಂದಾಗಿದ್ದಾರೆ, ಜಿಲ್ಲೆಯಲ್ಲಿ ನಾನೊಬ್ಬನೇ ಕ್ರಷರ್ ಮಾಲಿಕನಿದ್ದೇನಾ ಎಂದು ಶಾಸಕ ಕೆ.ವೈ. ನಂಜೇಗೌಡ ಸಂಸದರ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಸಚಿವ ಸಿ.ಸಿ. ಪಾಟೀಲರು ಸಂಸದ ಮುನಿಸ್ವಾಮಿ ಜೊತೆಗೂಡಿ ಕ್ರಷರ್ಗಳ ಪರಿಶೀಲನೆಗೆ ಆಗಮಿಸಿದ್ದರು. ಶಾಸಕ ನಂಜೇಗೌಡ ಮಾಲಿಕತ್ವದ ಕ್ರಷರ್ಗೂ ಭೇಟಿ ನೀಡಿದ ವೇಳೆ ಶಾಸಕ ಹಾಗೂ ಸಂಸದರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ನಂಜೇಗೌಡ, ಸಚಿವರೊಂದಿಗೆ ಬಂದ ಸಂಸದರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿಲ್ಲ, ಜನರ ಕಷ್ಟ ಸುಖದ ಬಗ್ಗೆ ಕೇಳಿಲ್ಲ, ಅವರಿಗೆ ಬರೀ ನಂಜೇಗೌಡ ಅವರದ್ದೆ ಧ್ಯಾನವಾಗಿದೆ ಎಂದು ಟೀಕಿಸಿದರು.
ಈ ಕ್ರಷರ್ ಅಕ್ರಮವಾಗಿದ್ದರೆ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ. ಅದನ್ನ ಬಿಟ್ಟು ಸಂಸದರಿಗೆ ಎದ್ದರೆ ಕುಂತರೆ ನನ್ನದೇ ಧ್ಯಾನ ಅಗಿದೆ. ಜಿಲ್ಲೆಯಲ್ಲಿ ನಾನೊಬ್ಬನೇ ಕ್ರಷರ್ ಮಾಲಿಕನಿದ್ದೇನಾ ಎಂದು ಪ್ರಶ್ನಿಸಿದರು. ನೂರಕ್ಕೆ ನೂರರಷ್ಟು ಕ್ರಷರ್ ಅಕ್ರಮವಲ್ಲ, ಒಂದು ವೇಳೆ ಹಾಗಿದ್ದರೆ ಕ್ರಷರ್ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಇದನ್ನೂ ಓದಿ: ಸಚಿವರ ಮುಂದೆಯೇ ಶಾಸಕ - ಸಂಸದರ ಮಾತಿನ ಜಟಾಪಟಿ