ಕೋಲಾರ: ಜಿಲ್ಲೆಯ ಹೊರವಲಯದ ಕೋಚಿಮುಲ್ ಬಳಿ ಪಶು ಆಹಾರ ಬೆಲೆ ಏರಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ತಮ್ಮ ಗ್ರಾಮಗಳಿಂದ ಎತ್ತಿನಗಾಡಿ ಸಮೇತವಾಗಿ ಬಂದಿದ್ದ ನೂರಾರು ರೈತರು ಕೋಚಿಮುಲ್ ಬಳಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ರು. ಕೋಲಾರ ಜಿಲ್ಲೆಯ ಜೀವನಾಡಿ ಆಗಿರೋ ಹೈನುಗಾರಿಕೆಗೆ ಕೋಚಿಮುಲ್‌ನಿಂದ ನೀಡುವ ಪಶು ಆಹಾರ ಬೆಲೆ ಏರಿಕೆಯನ್ನು ಕೂಡಲೇ ಇಳಿಸುವಂತೆ ರೈತರು ಆಗ್ರಹಿಸಿದ್ದಾರೆ.