ಕೋಲಾರ: ನಗರದ ಕಠಾರಿಪಾಳ್ಯ ಬಡಾವಣೆಯಲ್ಲಿ ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿಗೆ ಸ್ನೇಕ್ ರವಿ, ಚಿಕಿತ್ಸೆ ಕೊಡಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಠಾರಿಪಾಳ್ಯ ಬಡಾವಣೆಯಲ್ಲಿನ ನಾಗರಕುಂಟೆ ಕಲ್ಯಾಣಿ ಪುನಶ್ಚೇತನ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಮಣ್ಣು ಅಗೆಯುತ್ತಿದ್ದ ವೇಳೆ ಅಚಾನಕ್ಕಾಗಿ ಮಣ್ಣಿನೊಳಗಿದ್ದ ನಾಗರ ಹಾವಿಗೆ ಬಲವಾದ ಪೆಟ್ಟು ಬಿದ್ದಿತ್ತು. ನಾಗರಹಾವಿನ ನರಳಾಟ ಕಂಡ ಸ್ಥಳೀಯರು, ಕೋಲಾರದ ಸ್ನೇಕ್ ರವಿ ಅವರಿಗೆ ವಿಷಯ ತಿಳಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಸ್ನೇಕ್ ರವಿ, ಗಾಯಗೊಂಡಿದ್ದ ಹಾವನ್ನ ಪಶು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ನಂತರ ನಾಗರಹಾವನ್ನ ತಮ್ಮ ಮನೆಗೆ ಕೊಂಡೊಯ್ದು, ಹಾವು ಚೇತರಿಕೆಯಾದ ಬಳಿಕ ಅಂತರಗಂಗೆ ಬೆಟ್ಟದಲ್ಲಿ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.