ಕೋಲಾರ: ಮಣ್ಣಿನ ಗಣೇಶ ಮಾಡಿ ಪೂಜೆ ಸಲ್ಲಿಸಿ, ನಿಮಜ್ಜನ ಮಾಡಲು ಕೆರೆಗಿಳಿದ ವೇಳೆ ನಾಲ್ವರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಸೇರಿ ಆರು ಮಕ್ಕಳು ನೀರು ಪಾಲಾಗಿರುವ ದುರ್ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದ ಬಳಿ ಸಂಭವಿಸಿದೆ.
ಮೃತ ಮಕ್ಕಳನ್ನು ತೇಜಸ್ವಿ (11) ರಕ್ಷಿತಾ (8), ರೋಹಿತ್ (8) ಧನುಷ್(7), ವೀಣಾ(10) ವೈಷ್ಣವಿ (11) ಎಂದು ಗುರ್ತಿಸಲಾಗಿದೆ.
ಇವರೆಲ್ಲಾ ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿ ಸಮಿಪದ ಮರದಗಟ್ಟ ಗ್ರಾಮದ ನಿವಾಸಿಗಲಾಗಿತದ್ದಾರೆ. ಮಣ್ಣಿನ ಗಣೇಶ ಮಾಡಿ, ಪೂಜೆ ಸಲ್ಲಿಸಿದ ನಂತರ ಗ್ರಾಮದ ಪಕ್ಕದ ಚಿಕ್ಕ ಕೆರೆಯ ನೀರಿನಲ್ಲಿ ನಿಮಜ್ಜನ ಮಾಡಲು ಆರು ಮಕ್ಕಳು ನೀರಿಗಿಳಿದಿದ್ದಾರೆ. ಈ ವೇಳೆ ಮೂರು ಮಕ್ಕಳು ಕೆರೆಯಲ್ಲೇ ಸಾವನ್ನಪ್ಪಿದ್ದು, ಇನ್ನುಳಿದ ಮೂವರು ಕೆಜಿಎಫ್‌ನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಆ್ಯಂಡರ್‌ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.