ಕೋಲಾರ: ಹಣ ಕದ್ದ ಆರೋಪದಡಿ ರಸ್ತೆ ಬದಿ ಚಪ್ಪಲಿ ಹೊಲೆದುಕೊಂಡು ಜೀವನ ಸಾಗಿಸುತ್ತಿದ್ದ ಬಾಲಕನೊಬ್ಬನನ್ನು ಚಿಲ್ಲರೆ ಅಂಗಡಿ ಮಾಲಿಕ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಜರುಗಿದೆ.
ಬಂಗಾರಪೇಟೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಚಪ್ಪಲಿ ಹೊಲೆಯುತ್ತಿದ್ದ ಬಾಲಕನ ಮೇಲೆ ಕಳ್ಳತನದ ಆರೋಪ ಹೊರೆಸಿ ಚಿಲ್ಲರೆ ಅಂಗಡಿ ಮಾಲೀಕ ಉಮೇಶ್ ಹಾಗೂ ಆತನ ಸ್ನೇಹಿತ, ಬಾಲಕನನ್ನ ಊಟ ಕೊಡಿಸುವ ನೆಪದಲ್ಲಿ ಕೆರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈಯರ್ ಹಾಗೂ ಹಗ್ಗದಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕನ ವಿಡಿಯೋ ಮತ್ತು ಫೋಟೊ ವೈರಲ್ ಆಗಿದ್ದು, ಮಾಲಿಕ ಉಮೇಶ್ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.