ಕೋಲಾರ: ಮಾಲೂರು ರೈಲ್ವೆ ನಿಲ್ದಾಣದಿಂದ ಇಂದು ಸಾವಿರಾರು ವಲಸೆ ಕೂಲಿ ಕಾರ್ಮಿಕರನ್ನ ಬಿಹಾರಕ್ಕೆ ವಿಶೇಷ ರೈಲಿನ ಮೂಲಕ ಕಳುಹಿಸಿ ಕೊಡಲಾಯಿತು.
ಕಳೆದ ಎರಡು ದಿನಗಳಿಂದ ವಲಸೆ ಕಾರ್ಮಿಕರಿಗಾಗಿ 4 ರೈಲುಗಳು ಸಂಚಾರ ಮಾಡಿದ್ದು, ಉತ್ತರ ಭಾರತದ ರಾಜ್ಯಗಳಾದ ಬಿಹಾರ, ಒಡಿಶಾ, ಜಾರ್ಖಂಡ್ ರಾಜ್ಯಗಳಿಗೆ ವಿಶೇಷ ರೈಲಿನ ಮೂಲಕ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳಿಸಲಾಯಿತು.
ಕೇಂದ್ರ ವಲಯದ ಐಜಿಪಿ ಶರತ್ ಚಂದ್ರ ಅವರ ನೇತೃತ್ವದಲ್ಲಿ 1,200 ವಲಸೆ ಕಾರ್ಮಿಕರನ್ನು ಪರಿಶೀಲನೆ ನಡೆಸಿ, ಇಂದು ಕೋಲಾರದಿಂದ ಬಿಹಾರಕ್ಕೆ ಕಳುಹಿಸಿಕೊಡಲಾಯಿತು. ಸೇವಾ ಸಿಂಧು ಆ್ಯಪ್ನಲ್ಲಿ ನೋಂದಣಿ ಮಾಡಿಕೊಂಡಿದ್ದ ಸಾವಿರಾರು ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಿಶೆಷ ರೈಲಿನ ವ್ಯವಸ್ಥೆ ಮಾಡಿದೆ.
ನಿನ್ನೆ ಬೆಂಗಳೂರಿನ ಪಾದರಾಯನಪುರ, ಕೆಆರ್‌ಮಾರುಕಟ್ಟೆ, ಕಲಾಸಿಪಾಳ್ಯ ಭಾಗದಲ್ಲಿ ವಾಸವಾಗಿದ್ದ ಬಿಹಾರ ಮೂಲದ ಕೂಲಿ ಕಾರ್ಮಿಕರು ಸೇರಿದಂತೆ ಬೆಂಗಳೂರಿನ ವಿವಿಧೆಡೆ ಕೆಲಸ ಮಾಡುತ್ತಿದ್ದ ಉತ್ತರ ಭಾರತದ ವಲಸೆ ಕಾರ್ಮಿಕರನ್ನ ಕರೆದೊಯ್ದ ರೈಲಿಗೆ ಚಪ್ಪಾಳೆ ತಟ್ಟುವ ಮೂಲಕ ಬೆಂಗಳೂರು ಆಯುಕ್ತ ಭಾಸ್ಕರ್ ರಾವ್ ಚಾಲನೆ ನೀಡಿದ್ದರು.