ಕೋಲಾರ : ಸಂಕಷ್ಟದಲ್ಲಿರುವ ರೈತರು ಬೆಳೆದಿರುವ ಬೆಳೆಗಳನ್ನು ತಾವೇ ಖರೀದಿಸಿ ಅದನ್ನು ತಮ್ಮ ಕ್ಷೇತ್ರದಲ್ಲಿನ ಬಡವರಿಗೆ ಹಂಚುವ ಮೂಲಕ ರೈತರು, ಹಸಿದವರಿಗೆ ಸಂಸದ ಮುನಿಸ್ವಾಮಿ ನೆರವಾಗುತ್ತಿದ್ದಾರೆ.
ಮಾಲೂರು ತಾಲ್ಲೂಕು ಕೂಗಿಟಿಗಾನಹಳ್ಳಿ ಗ್ರಾಮದ ಚೆನ್ನರಾಯ, ಮುನಿಕೃಷ್ಣಪ್ಪ, ನಾರಾಯಣಸ್ವಾಮಿ ಎಂಬ ರೈತರ ತೋಟಗಳಿಗೆ ತಾವೇ ಸ್ವತ: ಭೇಟಿ ನೀಡಿ ಟೊಮ್ಯಾಟೋ, ಬದನೆಕಾಯಿ, ಪಾಲಕ್ ಸೊಪ್ಪು, ಕೊತ್ತಂಬರಿ, ಎಲೆಕೋಸು, ಹೂಕೋಸು ಸೇರಿದಂತೆ ಹಲವು ತರಕಾರಿಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಿದರು.