ETV Bharat / state

ಸಿಎಂ ಆಗಿದ್ದ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಡುತ್ತಿರುವುದು ಶೋಚನೀಯ: ಸಂಸದ ಮುನಿಸ್ವಾಮಿ - muniswamy talk on siddaramaiah

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಚುನಾವಣೆಗಾಗಿ ಕ್ಷೇತ್ರ ಹುಡುಕಾಟ ಮಾಡುತ್ತಿರುವುದು ಅಂತ್ಯತ ಶೋಚನೀಯ ವಿಚಾರ ಎಂದು ಎಸ್.ಮುನಿಸ್ವಾಮಿ ಹೇಳಿದರು.

KN_KLR_
ಎಸ್.ಮುನಿಸ್ವಾಮಿ
author img

By

Published : Nov 14, 2022, 3:35 PM IST

ಕೋಲಾರ: ಸಿದ್ದರಾಮಯ್ಯ ಅವರು ಹತ್ತು ಬಾರಿ ಅಲ್ಲದೆ ಐವತ್ತು ಬಾರಿ ಕೋಲಾರದಲ್ಲಿ ಸ್ಪರ್ಧಿಸಿದರೂ, ನೂರಕ್ಕೆ ನೂರರಷ್ಟು ಅವರನ್ನು ಸೋಲಿಸಿ ಮನೆಗೆ ಕಳಿಸುವುದು ಗ್ಯಾರಂಟಿ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.

ಇಂದು ನಗರದಲ್ಲಿ ಸಿದ್ದರಾಮಯ್ಯ ಚುನಾವಣೆ ಸ್ಪರ್ಧೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಸ್ಪರ್ಧೆ ಮಾಡುವ ಸಲುವಾಗಿ ರಾಜ್ಯದಲ್ಲಿ ಕ್ಷೇತ್ರ ಹುಡುಕಾಟ ಮಾಡುತ್ತಿರುವುದು ಅಂತ್ಯತ ಶೋಚನೀಯ ವಿಚಾರ. ಅಲ್ಲದೆ ಸಿಎಂ ಆಗಿದ್ದವರು ಚಾಮುಂಡೇಶ್ವರಿಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ, ಜೊತೆಗೆ ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರೆಷ್ಟೇ ತಿಪ್ಪರಲಾಗ ಹಾಕಿದರೂ ಕೋಲಾರದಲ್ಲಿ ಅವರು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.

ಇನ್ನು, ಕಾಂಗ್ರೆಸ್​ ಪಕ್ಷದಲ್ಲಿ ಆಂತರಿಕ ಒಳಜಗಳ ಭಿನ್ನಾಭಿಪ್ರಾಯಗಳಿವೆ, ಭಾನುವಾರ ನಡೆದ ಕಾರ್ಯಕ್ರಮದಿಂದ ಕೆ.ಎಚ್. ಮುನಿಯಪ್ಪ ಬಣದವರು ಹಾಗೂ ಕೆಜಿಎಫ್ ಶಾಸಕಿ ದೂರ ಉಳಿದಿದ್ದು ಅದಕ್ಕೆ ಉದಾಹರಣೆಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಕೆಲವರಿಗೆ ಸೋಲುವ ಭಯ ಕಾಡುತ್ತಿರುವುದರಿಂದ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರುತ್ತಿದ್ದಾರೆ.

ಎಸ್.ಮುನಿಸ್ವಾಮಿ ಪ್ರತಿಕ್ರಿಯೆ

ಜೊತೆಗೆ ಸಿದ್ದರಾಮಯ್ಯ ಅವರನ್ನು ಕರೆತರುತ್ತಿರುವ ನಾಯಕರೇ, ಮುಳಬಾಗಿಲು‌ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಕೋಲಾರ ಅಭ್ಯರ್ಥಿ ಎಂದು ಹೇಳಿ, ಇದೀಗ ಮೋಸ ಮಾಡುತ್ತಿದ್ದಾರೆ. ಅವರವರ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯರನ್ನು ಕರೆತರುತ್ತಿದ್ದಾರೆ. ಅವರು ಕೋಲಾರವನ್ನ 10 ಬಾರಿ ಅಲ್ಲಾ 20 ಸಲ ರೌಂಡ್ ಹಾಕಿದರೂ ಗೆಲ್ಲುವುದಿಲ್ಲ ಎಂದು ಸಂಸದ ಮುನಿಸ್ವಾಮಿ ಹೇಳಿದರು.

ರಾಜ್ಯದಲ್ಲಿ‌ ದಲಿತ ವಿರೋಧಿ, ಹಿಂದುಳಿದ ವರ್ಗದವರ ವಿರೋಧಿ ಎಂದರೆ ಅದು ಸಿದ್ದರಾಮಯ್ಯ. ಪರಮೇಶ್ವರ್ ಅವರ ಸೋಲಿಗೆ ಮಲ್ಲಿಕಾರ್ಜುನ್​ ಅವರ ಸೋಲಿಗೆ ಕಾರಣರಾಗಿದ್ದವರು ಇವರು, ಇದಲ್ಲದೆ ಅವರದ್ದೇ ಸಮುದಾಯದವರಾದ ಎಂಟಿಬಿ ನಾಗರಾಜ್, ಶಂಕರ್ ಅವರ ರಾಜಕೀಯ ಪರಿಸ್ಥಿತಿಯನ್ನು ಯಾವ ರೀತಿ ಮಾಡಿದ್ದಾರೆಂದು ಗೊತ್ತಿದೆ ಎಂದರು.

ಇದನ್ನೂ ಓದಿ: 'ಪ್ರಾದೇಶಿಕ ಪಕ್ಷಕ್ಕಿಂತಲೂ ಕಾಂಗ್ರೆಸ್‌ ಕಡೆ, ಅಡ್ರೆಸ್ ಇಲ್ಲದೆ ಹೋಗುವ ದುಸ್ಥಿತಿ ಬರಬಹುದು'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.