ಕೋಲಾರ: ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಬಂದ ನೂತನ ಸಂಸದ ಎಸ್.ಮುನಿಸ್ವಾಮಿಯವರನ್ನು ನೋಡಲು ಅವರ ಅಭಿಮಾನಿಗಳು ಮಗಿಬಿದ್ದಿದ್ದರು.
ತಾಲೂಕಿನ ಕೆಂದನಹಳ್ಳಿಗೆ ಸಂಸದ ಭೇಟಿ ನೀಡಿದ್ದು, ಸಂಸದರ ಜೊತೆ ಪೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಹರಸಾಹಸ ಪಟ್ಟಿದ್ದಾರೆ. ಸುಮಾರು 1 ಗಂಟೆಗೂ ಅಧಿಕ ಸಮಯ ಕ್ಯೂನಲ್ಲಿ ನಿಂತ ತಮ್ಮ ಅಭಿಮಾನಿಗಳಿಗೆ ಹಾಗೂ ಮತದಾರರಿಗೆ ಪೋಸ್ ಕೊಡುವುದರಲ್ಲಿ ನೂತನ ಸಂಸದರು ಬ್ಯುಸಿಯಾಗಿದ್ದರು.
ಒಟ್ಟಾರೆ ಏನೇ ಆಗಲಿ 7 ಬಾರಿ ಸಂಸದರಾಗಿದ್ದ ಮುನಿಯಪ್ಪ ಅವರನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದ ಮುನಿಸ್ವಾಮಿ ಗೆಲುವಿನ ಸಂಭ್ರಮವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.