ETV Bharat / state

ಲಾಟರಿ ತೋರಿಸಿ ಮಕ್ಕಳ ಅಪಹರಣ : ಗ್ಯಾಂಗ್​ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು - ಲಾಟರಿ ತೋರಿಸಿ ಮಕ್ಕಳ ಅಪಹರಣ ಮಾಡುತ್ತಿದ್ದ ಆರೋಪಿಗಳು

ಐವರು ಆರೋಪಿಗಳಲ್ಲಿ ಮೂವರು ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳಿಂದ ಓಮಿನಿ ಕಾರು ಸೇರಿ ಲಾಟರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

children kidnapping accused arrest
ಮಕ್ಕಳ ಅಪಹರಣ ಗ್ಯಾಂಗ್​ ಅಂದರ್​
author img

By

Published : Sep 15, 2021, 7:39 PM IST

ಕೋಲಾರ : ಲಾಟರಿ ಆಸೆ ತೋರಿಸಿ ಮಕ್ಕಳನ್ನು ಅಪಹರಣ ಮಾಡುವ ಶಂಕೆ ಹಿನ್ನೆಲೆ ಸ್ಥಳೀಯರು ಗ್ಯಾಂಗ್​ವೊಂದನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೋಲಾರ ನಗರಲ್ಲಿ ನಡೆದಿದೆ.

ಮಕ್ಕಳನ್ನು ಅಪಹರಣ ಮಾಡುತ್ತಿದ್ದ ಗ್ಯಾಂಗ್​ ಅಂದರ್​

ಇಲ್ಲಿನ ರೆಹಮತ್ ನಗರದಲ್ಲಿ ಓಮಿನಿ ಕಾರಿನಲ್ಲಿ ಬಂದ ಐವರ ಗ್ಯಾಂಗ್, ಮಕ್ಕಳು ಆಟವಾಡುವಂತಹ ವಸ್ತುಗಳು ಸೇರಿದಂತೆ ಇತರೆ ವಸ್ತುಗಳ ಮೇಲೆ ಲಾಟರಿ ಇಟ್ಟಿದ್ದರು. ಇದಕ್ಕೆ 100 ರೂ. ನಿಗದಪಡಿಸಿ ಕಾರಿನ ಬಳಿ ಮಕ್ಕಳನ್ನು ಕರೆಯುತ್ತಿದ್ದರು.

ಈ ವೇಳೆ ಮಕ್ಕಳಿಗೆ ಲಾಟರಿಯಲ್ಲಿದ್ದ ಬಂದಿದ್ದ ವಸ್ತುಗಳನ್ನು ನೀಡದೆ ಆ ವಸ್ತುಗಳು ಬೇರೆ ಕಡೆ ಇವೆ ಎಂದ್ಹೇಳಿ ಮಕ್ಕಳನ್ನು ಪುಸಲಾಯಿಸಿ ಬೇರೆಡೆಗೆ ಕರೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.

ಐವರು ಆರೋಪಿಗಳಲ್ಲಿ ಮೂವರು ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳಿಂದ ಓಮಿನಿ ಕಾರು ಸೇರಿ ಲಾಟರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಗುಟ್ಕಾ ತಿಂದು ಆಸ್ಪತ್ರೆ ಮುಂಭಾಗದಲ್ಲಿ ಉಗುಳಿದ ವ್ಯಕ್ತಿ: ಆತನ ಕೈಯಿಂದಲೇ ಸ್ವಚ್ಛಗೊಳಿಸಿದ ಜಿಲ್ಲಾಧಿಕಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.