ETV Bharat / state

ಕೆಜಿಎಫ್​ನಲ್ಲಿ 2 ದಶಕಗಳ ನಂತರ ಮತ್ತೆ ಚಿನ್ನದ ಗಣಿ ಪುನಾರಂಭಕ್ಕೆ ತಯಾರಿ - ಕೆಜಿಎಫ್​ನಲ್ಲಿ ಮತ್ತೆ ಚಿನ್ನದ ಗಣಿ ಪುನರಾರಂಭಕ್ಕೆ ತಯಾರಿ

ಕೆಜಿಎಫ್ ಭೂಮಿಯ ಮಣ್ಣಿನಲ್ಲಿ ಇರುವ ಖನಿಜದ ಅಂಶ ಹಾಗೂ ಚಿನ್ನದ ಅಂಶ ಎಷ್ಟಿದೆ ಅನ್ನೋದರ ಬಗ್ಗೆ ಪರೀಕ್ಷೆ ನಡೆಸಿ 6 ತಿಂಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈಗಾಗಲೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೆಜಿಎಫ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಪಸಾಗಿದ್ದಾರೆ.

KGF gold mining
ಕೋಲಾರ ಚಿನ್ನದ ಗಣಿ
author img

By

Published : Sep 29, 2020, 9:19 PM IST

ಕೋಲಾರ: ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಚಿನ್ನದ ನಾಡಿನಲ್ಲಿ ಎರಡು ದಶಕಗಳ ನಂತರ ಮತ್ತೆ ಚಿನ್ನದ ಗಣಿ ಪುನಾರಂಭಕ್ಕೆ ತೆರೆಮರೆಯಲ್ಲಿ ತಯಾರಿಗಳು ನಡೆಯುತ್ತಿದೆ. ಚಿನ್ನದ ಗಣಿಯ ಭೂಮಿ ಹಾಗೂ ಮಣ್ಣಿನ ಪರೀಕ್ಷೆಗಳು ನಡೆಯುತ್ತಿದ್ದು, ಚಿನ್ನದ ನಾಡಿನ ಗತ ವೈಭವ ಮತ್ತೆ ಮರುಕಳಿಸುತ್ತಾ ಅನ್ನೋ ನಿರೀಕ್ಷೆ ಗರಿಗೆದರಿವೆ.

ಕೋಲಾರ ಜಿಲ್ಲೆ ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಚಿನ್ನವನ್ನು ಕೊಟ್ಟಂತಹ ಇತಿಹಾಸವನ್ನು ಹೊಂದಿದೆ. ಆದ್ರೆ ಚಿನ್ನ ಬರಿದಾಗಿ ಎರಡು ದಶಕಗಳೇ ಕಳೆದಿವೆ, ಸಾವಿರಾರು ಮಂದಿ ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಸರ್ಕಾರಗಳು ನಾನಾ ಯೋಜನೆಗಳನ್ನ ಜಾರಿ ಮಾಡುವ ಭರವಸೆಗಳನ್ನ ನೀಡುತ್ತಾ ಕಣ್ಣೊರೆಸುವ ತಂತ್ರ ಮಾಡಿಕೊಂಡು ಬಂದಿದ್ದು, ಇದುವರೆಗೂ ಕೆಜಿಎಫ್ ಗಣಿ ಪುನಾರಂಭ ಆಗಲೇ ಇಲ್ಲ. ಸದ್ಯ ಸರ್ಕಾರ ಕೈಗಾರಿಕಾ ಟೌನ್ ಶಿಫ್ ಮತ್ತು ಚಿನ್ನದ ಗಣಿ ಮತ್ತೆ ಓಪನ್ ಮಾಡಲು ಮುಂದಾಗಿದೆ.

ಕೆಜಿಎಫ್​ನಲ್ಲಿ ಮತ್ತೆ ಚಿನ್ನದ ಗಣಿ ಪುನಾರಂಭಕ್ಕೆ ತಯಾರಿ

ಈಗಾಗಲೇ ಚಿನ್ನದ ನಿಕ್ಷೇಪಗಳು ಎಲ್ಲೆಲ್ಲಿ ಇದೆ. ಅದರಲ್ಲಿ ಚಿನ್ನದ ಸಾಂದ್ರತೆ ಎಷ್ಟಿದೆ ಅನ್ನೋದನ್ನು ಪರೀಕ್ಷೆ ನಡೆಸಿದ್ದ ಗಣಿ ಇಲಾಖೆ ಈಗ ಮತ್ತೆ ಚಿನ್ನವನ್ನು ಬೇರ್ಪಡಿಸಿ ಹಾಕಲಾಗಿದ್ದ ಸೈನೆಡ್ ಗುಡ್ಡಗಳಲ್ಲಿ ಚಿನ್ನದ ಅಂಶ ಎಷ್ಟಿದೆ ಅನ್ನೋದನ್ನ ಪರೀಕ್ಷೆ ನಡೆಸಲು ಮುಂದಾಗಿದೆ. ಮೂರನೇ ಹಂತದ ಸೈನೈಡ್ ಗುಡ್ಡದ ಮಣ್ಣನ್ನು ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಮಣ್ಣು ಮತ್ತು ಖನೀಜ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲದೇ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಮಿನರಲ್ ಎಕ್ಸ್ ಪ್ಲರೇಷನ್ ಕಾರ್ಪೋರೇಷನ್ ಲಿಮಿಟೆಡ್ ಅಧಿಕಾರಿಗಳು, ಭಾರತ ಗೋಲ್ಡ್ ಮೈನ್ಸ್​​ನ ಗುತ್ತಿಗೆ ಭೂಮಿಯಲ್ಲಿ ಪರಿಶೋಧನೆ ಕಾರ್ಯದ ಪರಿವೀಕ್ಷಣೆಯನ್ನು ಮಾಡಿದ್ದಾರೆ.

ಇನ್ನೂ ಕೆಜಿಎಫ್ ಭೂಮಿಯ ಮಣ್ಣಿನಲ್ಲಿ ಇರುವ ಖನಿಜದ ಅಂಶ ಹಾಗೂ ಚಿನ್ನದ ಅಂಶ ಎಷ್ಟಿದೆ ಅನ್ನೋದರ ಬಗ್ಗೆ ಪರೀಕ್ಷೆ ನಡೆಸಿ 6 ತಿಂಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈಗಾಗಲೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೆಜಿಎಫ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಪಸಾಗಿದ್ದಾರೆ.

ಒಂದು ವೇಳೆ ಚಿನ್ನದ ನಿಕ್ಷೇಪವಿರುವುದು ಖಚಿತವಾದ್ರೆ, ಚಿನ್ನದ ಗಣಿ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದೆಲ್ಲಾ ಅಂದುಕೊಂಡಂತೆ ನಡೆದರೆ ನಗರದಲ್ಲಿ ಇರುವ ಸೈನೆಡ್ ಗುಡ್ಡಗಳಲ್ಲಿ ಟಂಗ್ ಸ್ಟನ್, ಪೊಲಾಡಿಯಂ ಮತ್ತು ಚಿನ್ನದ ಅಂಶ ಇರುವ ಮಾಹಿತಿ ಇದೆ. ಸುಮಾರು ಇಪ್ಪತ್ತೈದು ಸಾವಿರ ಕೋಟಿ ಬೆಲೆ ಬಾಳುವಷ್ಟಿದೆ ಅನ್ನೋ ಮಾತು ಕೂಡಾ ಕೇಳಿ ಬರ್ತಿದೆ. ಸದ್ಯ ಶೀಘ್ರದಲ್ಲಿಯೇ ಕೆಜಿಎಫ್ ನಗರ ಮತ್ತೆ ಹಿಂದಿನ ಗತವೈಭವಕ್ಕೆ ಮರಳುತ್ತದೆ ಅನ್ನೋದು ಸಾವಿರಾರು ಗಣಿ ಕಾರ್ಮಿಕರು ಹಾಗೂ ಕುಟುಂಬಗಳ ನಿರೀಕ್ಷೆಯಾಗಿದೆ.

ಒಟ್ಟಿನಲ್ಲಿ 2 ದಶಕಗಳ ನಂತರ ಈಗ ಮತ್ತೆ ಕೆಜಿಎಫ್‌ನಲ್ಲಿ ಚಿನ್ನದ ನೆಲದ ಗತವೈಭವ ಮರುಕಳಿಸುವ ಕುರಿತು ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಕೋಲಾರ ಚಿನ್ನದ ಗಣಿ ಸುವರ್ಣ ಯುಗ ಆರಂಭವಾಗಿ, ಈ ಭಾಗದ ಜನರ ನಿರೀಕ್ಷೆ ಕೂಡ ಸಾಕಾರವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.