ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಅವರಿಂದ ಕಳಪೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸಚಿವರ ತವರು ಜಿಲ್ಲೆಯಾಗಿರುವ ಕೋಲಾರದ ಮುಳಬಾಗಿಲಿನಲ್ಲಿ ಕಳಪೆ ಆಹಾರ ಪದಾರ್ಥಗಳ ಕಿಟ್ ಹಂಚಿಕೆ ಮಾಡಲಾಗಿದೆ. ಮುಳಬಾಗಿಲು ಪಟ್ಟಣದ ಕೆಲ ವಾರ್ಡ್ ಸೇರಿದಂತೆ ತಾಲೂಕಿನ ಕೊರೊನಾ ಸೋಂಕು ಪತ್ತೆಯಾದ ಗ್ರಾಮಗಳನ್ನ ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆ ನಿನ್ನೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಲ ಮುಖಂಡರು, ಮುಳಬಾಗಿಲು ತಾಲೂಕಿನ ಬೆಳಗಾನಹಳ್ಳಿ ಗ್ರಾಮದಲ್ಲಿ ಅಹಾರ ಪದಾರ್ಥಗಳ ಕಿಟ್ಗಳನ್ನ ವಿತರಣೆ ಮಾಡಿದ್ರು.
ಈ ಕಿಟ್ಗಳಲ್ಲಿದ್ದ ಅಕ್ಕಿ, ಉಪ್ಪು, ಬೇಳೆಯಲ್ಲಿ ಹುಳುಗಳು ಬಿದ್ದಿದ್ದು, ಕಳಪೆ ಗುಣಮಟ್ಟದ ಆಹಾರ ಪದಾರ್ಥ ನೀಡಿದ್ದಾರೆಂದು ಕಿಟ್ ಪಡೆದವರು ಅರೋಪಿಸಿದ್ದಾರೆ. ಸಚಿವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕಿಟ್ಗಳನ್ನ ವಾಪಸ್ ಮಾಡಿದ್ದಾರೆ.