ಕೋಲಾರ : ರೈತ ಸಂಘದ ಕಾರ್ಯಕರ್ತೆ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ.
ಜಿಲ್ಲೆಯ ಬಂಗಾರಪೇಟೆ ಪಟ್ಟಣದ ವಿಜಯನಗರದಲ್ಲಿ ಈ ಘಟನೆ ಜರುಗಿದ್ದು, ಘಟನೆ ಸಂಬಂಧ ನಾಲ್ಕು ಜನರನ್ನ ಬಂಧಿಸಿ, ಮೂವರು ಮಹಿಳೆಯರನ್ನ ರಕ್ಷಣೆ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಬಂಗಾರಪೇಟೆ ಸಿಪಿಐ ನವೀನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ರಾಜೇಶ್, ಚಂದ್ರ, ರವಿ ಎಂಬುವವರನ್ನ ಬಂಧಿಸಿದ್ದಾರೆ.
ಬಂಧಿತರಿಂದ ನಾಲ್ಕು ಸಾವಿರ ಹಣವನ್ನ ವಶ ಪಡೆದಿದ್ದಾರೆ. ಜೊತೆಗೆ ಅಸ್ಸೋಂ ಹಾಗೂ ಆಂಧ್ರಪ್ರದೇಶದ ಮೂಲದ ಮೂವರು ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ. ಇನ್ನು ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ : ಒಬ್ಬನೊಂದಿಗೆ ತಾಯಿ - ಮಗಳು ವಿವಾಹೇತರ ಸಂಬಂಧ.. ಅಡ್ಡ ಬಂದ ತಂದೆಯನ್ನೇ ಕೊಲ್ಲಿಸಿದ ಮಹಿಳೆ!