ETV Bharat / state

ಬಂಗಾರಪೇಟೆ: ಮೃತದೇಹ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್​ ಮೇಲೆ ಕಲ್ಲು ತೂರಾಟ - ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯ ಆ್ಯಂಬುಲೆನ್ಸ್​ ಮೇಲೆ ಕಲ್ಲು ತೂರಾಟ

ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್​ ಇರುವುದು ಪತ್ತೆಯಾಗಿದ್ದು, ಶವವನ್ನು ಅತ್ಯಸಂಸ್ಕಾರಕ್ಕೆ ಎಂದು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕಿಡಿಗೇಡಿಗಳು ಆ್ಯಂಬುಲೆನ್ಸ್​ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

Pelted Stone on the Ambulance
ಆ್ಯಂಬುಲೆನ್ಸ್​ ಮೇಲೆ ಕಲ್ಲು ತೂರಾಟ
author img

By

Published : Jul 15, 2020, 2:34 PM IST

ಬಂಗಾರಪೇಟೆ( ಕೋಲಾರ): ಮೃತ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿರುವ ಹಿನ್ನೆಲೆ, ಅಂತ್ಯ ಸಂಸ್ಕಾರಕ್ಕೆ ತೆರಳುವ ಮಾರ್ಗ ಮಧ್ಯ ಆ್ಯಂಬುಲೆನ್ಸ್​​ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಕಳೆದ ರಾತ್ರಿ ಕೋಲಾರದ ಬಂಗಾರಪೇಟೆ ಸಮೀಪ ನಡೆದಿದೆ.

ಆ್ಯಂಬುಲೆನ್ಸ್​ ಮೇಲೆ ಕಲ್ಲು ತೂರಾಟ

ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯ, ಗಂಗಮನಪಾಳ್ಯ ಬಳಿ ಈ ಘಟನೆ ಜರುಗಿದೆ. ಕೋಲಾರದ ಖಾಸಗಿ ಅಸ್ಪತ್ರೆಯಲ್ಲಿ 45 ವರ್ಷದ ವ್ಯಕ್ತಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದರು. ನಂತರ ಕೋವಿಡ್ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಎಂದು ವರದಿ ಬಂದಿತ್ತು. ನಂತರ ವ್ಯಕ್ತಿಯ ಶವವನ್ನು ಅಂತ್ಯ ಸಂಸ್ಕಾರ ಮಾಡಲು ಬಂಗಾರಪೇಟೆಗೆ ಆ್ಯಂಬುಲೆನ್ಸ್​​ ಮೂಲಕ ಕೊಂಡೊಯ್ಯುವ ವೇಳೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಅಂತ್ಯಸಂಸ್ಕಾರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಆ್ಯಂಬುಲೆನ್ಸ್​ಗೆ​​ ಅಡ್ಡಗಟ್ಟಿ, ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆ್ಯಂಬುಲೆನ್ಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಇನ್ನು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಕಾರಣ ಪೊಲೀಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದಿದ್ದಾರೆ. ಡಿವೈಎಸ್​ಪಿ ಉಮೇಶ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.