ETV Bharat / state

ನಕಲಿ ಫೇಸ್​ಬುಕ್ ಮೆಸೇಜ್ ನಂಬಿ ಹಣ ಕಳೆದುಕೊಂಡ ವೈದ್ಯರು - online fraud to Doctors in Kolar

ಕೋಲಾರದಲ್ಲಿ ಆನ್​ಲೈನ್​ ವಂಚನೆಗೆ ಒಳಗಾದ ಇಬ್ಬರು ವೈದ್ಯರು ಹಣ ಕಳೆದುಕೊಂಡಿದ್ದಾರೆ.

Fake facebook account
ಆನ್​ಲೈನ್​ ವಂಚನೆ
author img

By

Published : Jun 12, 2021, 9:39 AM IST

ಕೋಲಾರ: ಆನ್​ಲೈನ್​ ವಂಚನೆಯ ಬಗ್ಗೆ ಎಚ್ಚರವಾಗಿರುವಂತೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅದರಲ್ಲೂ ಉನ್ನತ ವಿದ್ಯಾವಂತರೇ ಈ ಜಾಲಕ್ಕೆ ಸಿಲುಕುತ್ತಿರುವುದು ವಿಪರ್ಯಾಸ. ಇದೀಗ ಕೋಲಾರದಲ್ಲಿ ಇಬ್ಬರು ವೈದ್ಯರು ಆನ್​ಲೈನ್​ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.

ಜಿಲ್ಲೆಯ ಮುಳಬಾಗಿಲು ತಾಲೂಕಿನ ರಾಕೇಶ್ ಹಾಗೂ ರೀನಾ ಎಂಬ ಇಬ್ಬರು ವೈದ್ಯರು ಆನ್​​ಲೈನ್ ದೋಖಾ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡವರು. ಜಿಲ್ಲಾ ಔಷಧ ಗೋಡೌನ್​ ನಿರ್ವಾಹಕ ಶ್ರೀರಾಮ ಎಂಬುವರ ಹೆಸರಿನಲ್ಲಿ ನಕಲಿ ಫೇಸ್​​ಬುಕ್ ಖಾತೆ ಸೃಷ್ಟಿಸಿದ ಖದೀಮರು, ತುರ್ತಾಗಿ ಹಣ ಬೇಕೆಂದು ವೈದ್ಯರಿಗೆ ಮೆಸೇಜ್ ಮಾಡಿದ್ದರು. ಮೆಸೇಜ್ ಮಾಡಿರುವುದು ಶ್ರೀರಾಮ ಅವರೇ ಎಂದು ನಂಬಿದ ವೈದ್ಯರು ತಲಾ 18 ಸಾವಿರ ರೂ.ನಂತೆ ಹಣ ಕಳಿಸಿದ್ದರು.

ಹಣ ಕಳಿಸಿದ ಬಳಿಕ ಔಷಧ ಗೋಡೌನ್​ ನಿರ್ವಾಹಕ ಶ್ರೀರಾಮ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ತಾವು ಮೋಸ ಹೋಗಿರುವ ಬಗ್ಗೆ ವೈದ್ಯರಿಗೆ ಗೊತ್ತಾಗಿದೆ. ಈ ಬಗ್ಗೆ ವೈದ್ಯರು ಪೊಲೀಸರ ಮೊರೆ ಹೋಗುವ ಸಾಧ್ಯತೆಯಿದೆ.

ಓದಿ : ಕಂಟೇನ್ಮೆಂಟ್ ಝೋನ್​ ಅತಿಕ್ರಮಣ ಪ್ರವೇಶಿಸಿ ಕರ್ತವ್ಯದಲ್ಲಿದ್ದ ಮಹಿಳಾ ಪಿಡಿಒಗೆ ಬೆದರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.