ETV Bharat / state

ಆನ್​​ಲೈನ್​ ತರಗತಿ: ಲ್ಯಾಪ್​​ಟಾಪ್​, ಮೊಬೈಲ್​ ಕೊಡಿಸಲು ಪೋಷಕರಿಂದ ಸಾಲದ ಮೊರೆ - Online education

ಆನ್​​ಲೈನ್​ ತರಗತಿಗಳು ಆರಂಭವಾದ ಹಿನ್ನೆಲೆಯಲ್ಲಿ ಮಕ್ಕಳಿಗೆ ಲ್ಯಾಪ್​ಟಾಪ್​, ಮೊಬೈಲ್​ ಕೊಡಿಸುವ ಸಲುವಾಗಿ ಬಡ್ಡಿರಹಿತ ಸಾಲ ನೀಡುವಂತೆ ಮಹಿಳೆಯರು ಒತ್ತಾಯಿಸುತ್ತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹೇಳಿದರು.

DCC Bank
ಡಿಸಿಸಿ ಬ್ಯಾಂಕ್
author img

By

Published : Jul 8, 2020, 2:13 PM IST

ಕೋಲಾರ: ಕೊರೊನಾ ಭೀತಿಯಿಂದಾಗಿ ಶಾಲಾ ಮಕ್ಕಳಿಗೆ ಆನ್‍ಲೈನ್ ತರಗತಿಗಳನ್ನು ಸರ್ಕಾರ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಮಕ್ಕಳಿಗೆ ಲ್ಯಾಪ್​ಟಾಪ್​​, ಮೊಬೈಲ್ ಸೇರಿದಂತೆ ಇತರ ಸಾಮಾಗ್ರಿಗಳನ್ನು​ ಕೊಡಿಸಲು ಪೋಷಕರು ಸಾಲದ ಮೊರೆ ಹೋಗುತ್ತಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಅವರು ಈ ಕುರಿತು ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು, ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಬೇಕೆಂಬ ಸಲುವಾಗಿ, ಬಡ್ಡಿ ರಹಿತ ಸಾಲ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ

ಆದರೆ, ಬಡ್ಡಿ ರಹಿತ ಸಾಲ ಕೊಡುವುದಕ್ಕೆ ಕಷ್ಟ. ಹೀಗಾಗಿ ಏನೂ ಹೇಳದ ಪರಿಸ್ಥಿತಿಯಲ್ಲಿದ್ದೇವೆ. ಆನ್​​ಲೈನ್ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಸರ್ಕಾರದ ಯೋಜನೆ ಯಶಸ್ಸು ಕಾಣುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.