ಕೋಲಾರ : ಕೋಲಾರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಅವರು, ತಾವು ಮುನಿಯಪ್ಪ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಇನ್ನು ಪಕ್ಷ ಬದಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ 5 ವರ್ಷ ಪೂರೈಸಲಿದ್ದಾರೆ. ಸರ್ಕಾರ ಸುಭದ್ರವಾಗಿದೆ. ಲೋಕಸಭೆ ಫಲಿತಾಂಶದಿಂದ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ನೂತನ ಕೋಲಾರ ಲೋಕಸಭಾ ಸದಸ್ಯ ಮುನಿಸ್ವಾಮಿ, ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಮಾಡಲು 5 - 6 ಜನ ಶಾಸಕರನ್ನ ಕೊಡುವೆ ಎನ್ನುವ ಮೂಲಕ ಆಪರೇಷನ್ ಕಮಲದ ಸುಳಿವು ನೀಡಿದ್ರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀನಿವಾಸಗೌಡ, ಬಿಜೆಪಿ ಗೆಲ್ಲಿಸಲು ನಾವೆಲ್ಲಾ ಒಂದಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸರ್ಕಾರ ಸುಭದ್ರವಾಗಿರುತ್ತೆ. ಯಾರು ಕೂಡ ಪಕ್ಷ ಬಿಡಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರು ಆಯಾಯ ಪಕ್ಷದಲ್ಲಿ ಮುಂದುವರೆಯುತ್ತಾರೆ ಎಂದು ತಿಳಿಸಿದರು.
ನಾನು ಸಚಿವನಾಗಲು ಯಾವುದೇ ಬೇಡಿಕೆ ಇಟ್ಟಿಲ್ಲ. ಸಚಿವ ಸ್ಥಾನ ಕೊಟ್ರೆ ಬೇಡ ಎನ್ನಲ್ಲ. ನಾನು 10 ವರ್ಷಗಳ ಹಿಂದೆ ಮಂತ್ರಿಯಾಗಿದ್ದವನು. ಗೌರವಯುತವಾಗಿ ನಡೆದು ಕೊಂಡಿದ್ದೇನೆ. ಯಾವ ಖಾತೆಯ ಆಸೆಯೂ ನನಗಿಲ್ಲ. ಮಂತ್ರಿ ಮಾಡಿದ್ರೆ ನನ್ನಷ್ಟು ಖುಷಿ ಪಡುವವರೆ ಇಲ್ಲ ಎಂದು ಇದೇ ವೇಳೆ ತಮ್ಮ ಮನದಾಳವನ್ನ ಬಿಚ್ಚಿಟ್ಟರು.