ETV Bharat / state

ನೂತನ ಸಂಸದರ ನಗರ ಸಂಚಾರ: ನಗರಸಭೆ ಅಧಿಕಾರಿಗಳಿಗೆ ತರಾಟೆ - undefined

ಕೋಲಾರದ ನೂತನ ಸಂಸದ ಎಸ್.ಮುನಿಸ್ವಾಮಿ ನಗರಸಭೆ ಅಧಿಕಾರಿಗಳೊಂದಿಗೆ ಬೈಕ್​ನಲ್ಲಿ ನಗರ ಪ್ರದಕ್ಷಿಣೆ ಮಾಡಿ, ಕಸ ವಿಲೇವಾರಿ ವ್ಯವಸ್ಥೆ ಪರಿಶೀಲನೆ ನಡೆಸಿದರು. ಸರಿಯಾಗಿ ಕಸ ವಿಲೇವಾರಿ ಮಾಡದ್ದಕ್ಕೆ ಸ್ಥಳದಲ್ಲೇ ನಗರಸಭೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

Kolar
author img

By

Published : Jun 12, 2019, 10:11 PM IST

Updated : Jun 13, 2019, 7:36 AM IST

ಕೋಲಾರ: ಒಂದು ಕಾಲದಲ್ಲಿ ಕ್ಲೀನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೋಲಾರ ಇದೀಗ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಯಾಗಿದೆ. ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ನೂತನ ಸಂಸದರು ನಗರದಲ್ಲಿ ಪ್ರದಕ್ಷಿಣೆ ಹಾಕಿ, ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ.

ನೂತನ ಸಂಸದ ಎಸ್.ಮುನಿಸ್ವಾಮಿ ನಗರಸಭೆ ಅಧಿಕಾರಿಗಳೊಂದಿಗೆ ಬೈಕ್​ನಲ್ಲಿ ನಗರ ಪ್ರದಕ್ಷಿಣೆ ಮಾಡಿ, ಕಸ ವಿಲೇವಾರಿ ವ್ಯವಸ್ಥೆ ಪರಿಶೀಲನೆ ನಡೆಸಿದರು. ನಗರದ ಹೊಸ ಬಸ್ ನಿಲ್ದಾಣ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿದ ಸಂಸದರಿಗೆ ಹೋದಲ್ಲೆಲ್ಲಾ ಕಸದ ರಾಶಿಯೇ ಆಮಂತ್ರಿಸುವಂತಿತ್ತು. ಸರಿಯಾಗಿ ಕಸ ವಿಲೇವಾರಿ ಮಾಡದ್ದಕ್ಕೆ ಸ್ಥಳದಲ್ಲೇ ನಗರಸಭೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಬೆಳಗ್ಗೆ ಹತ್ತು ಗಂಟೆಯೊಳಗೆ ಕಸ ವಿಲೇವಾರಿ ಮಾಡದಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳೋದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು.

ನೂತನ ಸಂಸದರ ನಗರ ಸಂಚಾರ

ಈ ವೇಳೆ ನಗರಸಭೆ ಅಧಿಕಾರಿಗಳ ವಿರುದ್ಧ ಜನರು ದೂರುಗಳ ಸುರಿಮಳೆ ಸುರಿಸಿದರು. ಕಸದ ಸಮಸ್ಯೆ ಜೊತೆ ಒಳಚರಂಡಿ, ಬೀದಿ ದೀಪಗಳು, ರಸ್ತೆ, ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಂಸದರ ಗಮನಕ್ಕೆ ತಂದರು. ಅಮೃತ ಸಿಟಿ ಯೋಜನೆಯಡಿ ಯುಜಿಡಿ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ ಎಂಬ ದೂರಿಗೆ ಸ್ಥಳದಲ್ಲೇ ಗುತ್ತಿಗೆದಾರರಿಗೆ ಕರೆ ಮಾಡಿ, ಬೆವರಿಳಿಸಿದರು. ನಾಳೆ ಅಮೃತಸಿಟಿಯ ಎಲ್ಲ ಸಿಬ್ಬಂದಿ ತಮ್ಮ ಮುಂದೆ ಹಾಜರಾಗಬೇಕು ಎಂದು ಖಡಕ್ ಆದೇಶ ನೀಡಿದ್ರು.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಗರದಲ್ಲಿನ ಒಳಚರಂಡಿಗಳು ಬ್ಲಾಕ್ ಆಗಿ, ರಸ್ತೆಗಳಲ್ಲಿ ಕೊಳಚೆ ನೀಡು ಹರಿಯುತ್ತಿದೆ. ಆದರೂ ಅಧಿಕಾರಿಗಳು ಕ್ಯಾರೆ ಎಂದಿರಲಿಲ್ಲ. ಈ ಬಗ್ಗೆ ನಗರದ ಜನತೆಯಿಂದ ದೂರು ಬಂದ ಹಿನ್ನೆಲೆಯಲ್ಲಿ ಸಂಸದರು ನಗರ ಪ್ರದಕ್ಷಿಣೆ ಕೈಗೊಂಡಿದ್ದರು.

Intro:ಕೋಲಾರ
ದಿನಾಂಕ - 12-06-19
ಸ್ಲಗ್ - ಎಂಪಿ ಸಿಟಿ ರೌಂಡ್
ಫಾರ್ಮೆಟ್ - ಪ್ಯಾಕೇಜ್

ಅಂಕರ್: ಒಂದು ಕಾಲಕ್ಕೆ ಕ್ಲೀನ್ ಸಿಟಿ ಎಂದು ಹೆಸರು ಪಡೆದಿದ್ದ ಕೋಲಾರ ಇಂದು ಗಲ್ಲಿ ಗಲ್ಲಿಗಳಲ್ಲಿ ಕಸದಿಂದ ತುಂಬಿ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಯಾಗಿದೆ. ಈ ಹಿನ್ನಲೆ ನೂತನ ಎಂಪಿ ನಗರದಲ್ಲಿ ಪ್ರದಕ್ಷಿಣೆ ಹಾಕುವ ಮೂಲಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ.
Body:ವಾಯ್ಸ್ ಓವರ್ 1: ಹೀಗೆ ಎಲ್ಲೆಂದರಲ್ಲಿ ಕೊಳೆತುನಾರುತ್ತಿರುವ ಕಸ, ಮೂಗು ಮುಚ್ಚಿಕೊಂಡು ರಸ್ತೆಯಲ್ಲಿ ಓಡಾಡುತ್ತಿರುವ ಸಾರ್ವಜನಿಕರು, ಇನ್ನು ಇದನ್ನೆಲ್ಲಾ ಪರಿಶೀಲನೆ ನಡೆಸುತ್ತಿರುವ ನೂತನ ಸಂಸದ ಎಸ್.ಮುನಿಸ್ವಾಮಿ ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ಕ್ಲೀನ್ ಸಿಟಿ ಎಂದೆ ಹೆಸರಾಗಿದ್ದ ಕೋಲಾರ ನಗರದಲ್ಲಿ. ಹೌದು ಬೆಳ್ಳಂಬೆಳಗ್ಗೆ ನೂತನ ಸಂಸದ ಎಸ್.ಮುನಿಸ್ವಾಮಿ, ನಗರದಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡದ ಹಿನ್ನಲೆಯಲ್ಲಿ, ನಗರಸಭೆ ಅಧಿಕಾರಿಗಳೊಂದಿಗೆ ಬೈಕ್ನಲ್ಲಿ ನಗರ ಪ್ರದಕ್ಷಿಣೆ ಮಾಡಿದ್ರು. ನಗರದ ಹೊಸ ಬಸ್ ನಿಲ್ದಾಣ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುತ್ತಾಟ ನಡೆಸಿದಂತಹ ಸಂಸದರಿಗೆ ಹೋದಲ್ಲೆಲ್ಲಾ ಕಸದ ರಾಶಿ ಕಂಡು ಬಂತು, ಈ ಹಿನ್ನಲೆ ಸ್ಥಳದಲ್ಲಿಯೇ ನಗರ ಸಭೆ ಅಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡ್ರು. ಇನ್ನು ಮುಂದೆ ನಗರದಲ್ಲಿ ಬೆಳಗ್ಗೆ ಹತ್ತು ಗಂಟೆಯೊಳಗೆ ಕಸ ವಿಲೇವಾರಿ ಮಾಡದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳೊದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು.

ಬೈಟ್: 1. ಎಸ್.ಮುನಿಸ್ವಾಮಿ (ಸಂಸದರು)

ವಾಯ್ಸ್ ಓವರ್ 2: ಇನ್ನು ನೂತನ ಸಂಸದರ ಮಾನಿರ್ಂಗ್ ಪ್ರದಕ್ಷಿಣೆಯಲ್ಲಿ ಸಾರ್ವಜನಿಕರಿಂದ ನಗರಸಭೆ ಅಧಿಕಾರಿಗಳ ವಿರುದ್ದ ದೂರುಗಳ ಸುರಮಳೆ ಬಂದ ಹಿನ್ನಲೆ ಅಧಿಕಾರಿಗಳ ವಿರುದ್ದ ಎಂಪಿ ಗರಂ ಆದರು. ಜೊತೆಗೆ ಬೈಕ್ನಲ್ಲಿ ನಗರ ಪ್ರದಿಕ್ಷೆಣೆ ಮಾಡಿದ ನೂತನ ಸಂಸದರಿಗೆ ಕಸದ ಸಮಸ್ಯೆ ಜೊತೆಗೆ ಡ್ರೈನೇಜ್, ಸ್ವಚ್ಛತೆ, ಬೀದಿ ದೀಪಗಳು, ರಸ್ತೆಗಳು ಸೇರಿದಂತೆ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸ್ಥಳೀಯರು ಸಂಸದರ ಗಮನಕ್ಕೆ ತಂದರು. ನಗರದಲ್ಲಿ ಅಮೃತ ಸಿಟಿಯಿಂದ ಮಾಡಿರುವ ಯುಜಿಡಿ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ ಮತ್ತು ಯುಜಿಡಿಗಾಗಿ ರಸ್ತೆಗಳನ್ನು ಹಗೆದಿರುವ ಗುತ್ತಿಗೆದಾರರು ಸಮರ್ಪಕವಾದ ರಸ್ತೆಗಳನ್ನು ಮಾಡದೆ ಇರುವುದರಿಂದ ದೂರವಾಣಿಯಲ್ಲಿಯೇ ಅಮೃತಸಿಟಿಯ ಗುತ್ತಿಗೆದಾರರನ್ನು ಸಂಸದರು ತರಾಟೆಗೆ ತೆಗೆದುಕೊಂಡರು. ನಾಳೆ ಅಮೃತಸಿಟಿಯ ಎಲ್ಲ ಸಿಬ್ಬಂದಿ ತಮ್ಮ ಮುಂದೆ ಹಾಜರಾಗಬೇಕು ಎಂದು ಖಡಕ್ ಆದೇಶಿಸಿದ್ರು. ಇನ್ನು ಇತ್ತೀಚೆಗೆ ನಗರದಲ್ಲಿ ಬಿದ್ದಂತಹ ಮಳೆಯಿಂದಾಗಿ ನಗರದಲ್ಲಿನ ಒಳಚರಂಡಿಗಳು ಬ್ಲಾಕ್ ಆಗಿ ತುಂಬಿ ಹರಿಯುತ್ತಿದ್ದರು ನಗರಸಭೆ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿರಲಿಲ್ಲ. ಇದರಿಂದಾಗಿ ಮನೆಗಳಿಗೆ ಹಾವುಗಳು ಸೇರಿದಂತೆ ಕ್ರಿಮಿಕೀಟಗಳು ಮನೆಗೆ ನುಗ್ಗುತ್ತಿದ್ದು ಮನೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ನಗರದ ಜನತೆಯಿಂದ ದೂರಗಳು ಬಂದಿದ್ದ ಹಿನ್ನಲೆಯಲ್ಲಿ ನೂತನ ಸಂಸದರು ನಗರ ಪ್ರದಕ್ಷಿಣೆ ಮಾಡಲಾಗಿತ್ತು.

ಬೈಟ್: 2. ಚಲಪತಿ (ಸ್ಥಳೀಯರು)
Conclusion:ವಾಯ್ಸ್ ಓವರ್ 3: ಒಟ್ಟಾರೆ ಇನ್ನಾದರೂ ನಗರದಲ್ಲಿ ತಲೆದೂರಿರುವ ಕಸದ ಸಮಸ್ಯೆಯನ್ನ ನಗರಸಭೆ ಅಧಿಕಾರಿಗಳು ಬಗೆಹರಿಸಿ ಎಚ್ಚೆತ್ತುಕೊಂಡು ಬಗೆಹರಿಸುತ್ತರಾ ಅನ್ನೋದು ಕಾದುನೋಡಬೇಕು.
Last Updated : Jun 13, 2019, 7:36 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.