ETV Bharat / state

ಜಾತಿ ಭೂತ.. ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ, ಪೊಲೀಸ್ ಮೊರೆ ಹೋದ ನವಜೋಡಿ - ಕೋಲಾರದಲ್ಲಿ ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ಪೊಲೀಸ್ ರಕ್ಷಣೆಗೆ ಮೊರೆ ಹೋದ ನವ ಜೋಡಿ

ಶ್ರೀನಿವಾಸಪುರ ತಾಲೂಕಿನ ಆರ್.ತಿಮ್ಮಸಂದ್ರ ಗ್ರಾಮದ ಪ್ರೀತಿಸಿ ಮದುವೆಯಾದ ನವ ಜೋಡಿಯೊಂದು, ಮನೆಯವರು ವಿರೋಧ ಮಾಡುತ್ತಿರುವ ಹಿನ್ನೆಲೆ ಪೊಲೀಸರ​ ಮೊರೆಹೋಗಿದ್ದಾರೆ.

ಪೊಲೀಸ್ ರಕ್ಷಣೆಗೆ ಮೊರೆ ಹೋದ ನವ ಜೋಡಿ
ಪೊಲೀಸ್ ರಕ್ಷಣೆಗೆ ಮೊರೆ ಹೋದ ನವ ಜೋಡಿ
author img

By

Published : Mar 21, 2022, 8:20 PM IST

ಕೋಲಾರ: ಪ್ರೇಮ ವಿವಾಹಕ್ಕೆ ಮನೆಯವರು ವಿರೋಧ ಮಾಡುತ್ತಿರುವ ಹಿನ್ನೆಲೆ ನವಜೋಡಿ ಪೊಲೀಸ್ ಇಲಾಖೆಯ ಮೊರೆ ಹೋಗಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಆರ್.ತಿಮ್ಮಸಂದ್ರ ಗ್ರಾಮದ ನವಿತಾ ಹಾಗೂ ಮೋಹನ್ ಪ್ರೀತಿಸಿ ಮದುವೆಯಾಗಿರುವ ಯುವಜೋಡಿ.

ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ನವಜೋಡಿ

ಈ ಜೋಡಿ ಮಾರ್ಚ್ 7 ರಂದು ತಿರುಪತಿಯಲ್ಲಿ ವಿವಾಹವಾಗಿದ್ದು, ಪ್ರೇಮ ವಿವಾಹಕ್ಕೆ ಯುವತಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ನವಿತಾ ಮಾವ ಲೋಕೇಶ್ ನಿಂದ ಕೊಲೆ ಬೆದರಿಕೆ ಆರೋಪವಿದ್ದು, ಮನೆಯವರ ವಿರುದ್ಧ ಕೋಲಾರ ಎಸ್ಪಿ ಡಿ ದೇವರಾಜ್​​​ಗೆ ಯುವತಿ ದೂರು ನೀಡಿದ್ದಾಳೆ.

ಪತಿ ಮೋಹನ್ ಅನ್ಯ ಜಾತಿಗೆ ಸೇರಿದ ಹಿನ್ನೆಲೆ ನಮ್ಮ ಮನೆಯವರಿಂದ ವಿರೋಧ ಮಾಡುತ್ತಿದ್ದು, ನಮಗೆ ಬದುಕಲು ರಕ್ಷಣೆ ನೀಡಬೇಕೆಂದು ನವಿತಾ ಮನವಿ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.