ಕೋಲಾರ: ಅಂತರಗಂಗೆ ಬೆಟ್ಟದ ಜಾಗವನ್ನು ಖಾಸಗಿಯವರಿಗೆ ನೀಡಬಾರದು. ಅದು ಸರ್ಕಾರಿ ಸ್ವತ್ತು. ಅದು ಸರ್ಕಾರದ ಆಸ್ತಿಯಾಗಿಯೇ ಉಳಿಯಬೇಕು ಎಂದು ಸಂಸದ ಮುನಿಸ್ವಾಮಿ ಹೇಳಿದರು.
ಯೋಗ ದಿನಾಚರಣೆಗೆ ಕೋಲಾರದಲ್ಲಿ ವಿಶೇಷವಾದ ಪ್ರಯತ್ನಿಸಿ, ನಗರಕ್ಕೆ ಹೊಂದಿಕೊಂಡಿರುವ ಅಂತರಗಂಗೆ ಬೆಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆಯಿತು. ಯೋಗ ನಡೆದ ಸ್ಥಳ ಹಿಂದಿನ ಕಾಲದಲ್ಲಿ ರಾಜರು ವಾಸವಿದ್ದ ಸ್ಥಳ. ಅಲ್ಲಿ ಈಗಲೂ ತಂಗುದಾಣದಂತಹ ಕಟ್ಟಡ ಇದೆ. ಬೆಟ್ಟದ ಮೇಲೆ ಹಲವು ಕುರುಹುಗಳಿವೆ. ಹಾಗಾಗಿ ಈ ಸ್ಥಳವನ್ನು ಖಾಸಗಿಯವರಿಗೆ ನೀಡಬಾರದೆಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯನಗರ: ಹಾಡಹಗಲೇ ಹಂಪಿ ಕನ್ನಡ ವಿವಿ ಆವರಣದಲ್ಲಿ ಕರಡಿ ಪ್ರತ್ಯಕ್ಷ
ಜಿಲ್ಲಾಧಿಕಾರಿ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಆದ್ರೆ ಇಲ್ಲಿರುವ ಅರವತ್ತು ಎಕರೆಯಲ್ಲಿ ಈಗಾಗಲೇ ಹನ್ನೆರಡು ಎಕರೆ ಪ್ರದೇಶದ ಮಾಲೀಕತ್ವ ಖಾಸಗಿಯವರ ಹೆಸರಿನಲ್ಲಿದೆ. ಜಾಗ ಸಂಬಂಧ ಪ್ರಕರಣವೊಂದು ನ್ಯಾಯಾಲಯದ ಕಟ್ಟೆಯಲ್ಲಿದೆ. ಹೀಗಿದ್ದಾಗ್ಯೂ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಇಲ್ಲಿ ಅಂತಾರಾಷ್ಟ್ರೀಯ ಸ್ಟೇಡಿಯಂ ನಿರ್ಮಿಸುವ ಯೋಜನೆಗೆ ಒತ್ತು ನೀಡಿದ್ದರು. ಅದು ಪ್ರಗತಿ ಕಂಡಿರಲಿಲ್ಲ. ಇದೀಗ ಮತ್ತೊಮ್ಮೆ ಇದೇ ಸ್ಥಳ ಚರ್ಚೆಗೆ ಬಂದಿದ್ದು ಏನಾಗುತ್ತೆ ಎನ್ನುವ ಕುತೂಹಲ ಆರಂಭವಾಗಿದೆ.