ETV Bharat / state

ಸುರ್ಜೇವಾಲಾ ಯಾವೆಲ್ಲ ಇಲಾಖೆಯಿಂದ ಹಣ ಬರಬೇಕು ಎಂದು ಸಭೆ ನಡೆಸಿದ್ದಾರೆ : ಸಂಸದ ಮುನಿಸ್ವಾಮಿ ಆರೋಪ - ಈಟಿವಿ ಭಾರತ ಕನ್ನಡ ನ್ಯೂಸ್​​​

ಎಐಸಿಸಿ ಕಾರ್ಯದರ್ಶಿ ಹಾಗೂ ಕೆಪಿಸಿಸಿ ರಾಜ್ಯ ಉಸ್ತುವಾರಿಯಾದ ರಣದೀಪ್ ಸಿಂಗ್ ಸುರ್ಜೇವಾಲ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದನ್ನು ಸಂಸದ ಮುನಿಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಡಿ. ಎಸ್. ಅರುಣ್ ಖಂಡಿಸಿದ್ದಾರೆ.

mp-muniswamy-slams-ranadeep-singh-surjewala-on-meeting-with-officials
ಸುರ್ಜೇವಾಲ ಯಾವೆಲ್ಲ ಇಲಾಖೆಯಿಂದ ಹಣ ಬರಬೇಕು ಎಂದು ಸಭೆ ನಡೆಸಿದ್ದಾರೆ : ಸಂಸದ ಮುನಿಸ್ವಾಮಿ ಆರೋಪ
author img

By

Published : Jun 14, 2023, 7:58 PM IST

ಸಂಸದ ಮುನಿಸ್ವಾಮಿ ಆರೋಪ

ಕೋಲಾರ : ಸುರ್ಜೇವಾಲಾ ಅವರು ಯಾವ ಇಲಾಖೆಯಿಂದ ಎಷ್ಟು ಹಣ ಬರಬೇಕು ಎಂಬುದರ ಕುರಿತು ಸಭೆ ನಡೆಸಿದ್ದಾರೆ ಎಂದು ಸಂಸದ ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ಬಿಜೆಪಿಯವರನ್ನು ದೆಹಲಿಯ ಎಟಿಎಂ ಎಂದು ಆರೋಪಿಸುತ್ತಿದ್ದರು. ಇದೀಗ ಸುರ್ಜೇವಾಲಾ ಅವರು ರಾಜ್ಯದಲ್ಲಿ ಅಧಿಕಾರಿಗಳ ಸಭೆ ಮಾಡುವ ಮೂಲಕ ದೆಹಲಿಯ ಎಟಿಎಂ ಮಾಡಿಕೊಂಡಿದ್ದಾರೆ ಟೀಕಿಸಿದರು.

ನಮ್ಮ ನಾಯಕರು ಯಾರೂ ಬಿಜೆಪಿ‌ ಸರ್ಕಾರ ಇದ್ದಾಗ ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ. ಆದರೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆಶಿಯವರು, ಜಮೀರ್ ಅಹಮದ್ ಹಾಗೂ ಜಾರ್ಜ್ ಸೇರಿ ಸುರ್ಜೆವಾಲಾ ಸಭೆ ನಡೆಸಿದ್ದಾರೆ. ಈ‌ ಮೂಲಕ ಯಾವ ಇಲಾಖೆಯಿಂದ ಎಷ್ಟು ಹಣ ಬರಬೇಕು ಎಂದು ಸಭೆ ನಡೆಸಿ ತೀರ್ಮಾನಿಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್​ನವರಿಗೆ ನಾಚಿಕೆ ಆಗಬೇಕು, ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಎಂದು ಆರೋಪಿಸುತ್ತಿದ್ದರು. ಇದೀಗ ಕಾಂಗ್ರೆಸ್​ನವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸುರ್ಜೇವಾಲಾ ಅವರು ನಮ್ಮ ರಾಜ್ಯದ ಅಧಿಕಾರಿಗಳ ಜೊತೆ ಸಭೆ ನಡೆಸುವುದರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ‌ ಮಾಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆ ಜೆ ಜಾರ್ಜ್, ಜಮೀರ್ ಅಹಮದ್ ಇವರೆಲ್ಲ ಕರ್ನಾಟಕದ ಜನರ ಕ್ಷಮೆ ಕೇಳಬೇಕು. ಇದು ಪುನರಾವರ್ತನೆಯಾದರೆ ಉಗ್ರ ಹೋರಾಟ ಮಾಡುತ್ತೇವೆ. ಜೊತೆಗೆ ಕೋಲಾರದಿಂದ ರಾಜಭವನ ಚಲೋ‌ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸುರ್ಜೆವಾಲಾ ಅಧಿಕಾರಿಗಳ ಜೊತೆ ಸಭೆ.. ಡಿ.ಎಸ್. ಅರುಣ್ ಖಂಡನೆ : ಎಐಸಿಸಿ ಕಾರ್ಯದರ್ಶಿ ಹಾಗೂ ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದನ್ನು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಖಂಡಿಸಿದ್ದಾರೆ. ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿಯಲು ರಾಜ್ಯದ ಜನರು ತೀರ್ಪು ನೀಡಿದ್ದಾರೆ. ಯಾವುದೇ ಪಕ್ಷದ ಸರ್ಕಾರ ಆಡಳಿತ ನಡೆಸಬೇಕಾದರೆ ಸರ್ಕಾರದ ತೀರ್ಮಾನಗಳನ್ನು, ನೀತಿಗಳನ್ನು ಆಡಳಿತರೂಢ ಪಕ್ಷದ ಪ್ರಜಾಪ್ರತಿನಿಧಿಗಳು ತೆಗೆದುಕೊಳ್ಳಬೇಕು. ಇದೇ ಸಂವಿಧಾನದ ಆಶಯ. ಇದರ ಉದ್ದೇಶ ಸರ್ಕಾರದ ತೀರ್ಮಾನಗಳು ಜನಹಿತವಾಗಿರಬೇಕೆಂಬುದಾಗಿದೆ.

ಆದರೆ ಕಾಂಗ್ರೆಸ್ ಪಕ್ಷದ ಹೊಸ ವರಸೆ ಏನೆಂದರೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೂ ಅಲ್ಲದ, ಉಪಮುಖ್ಯಮಂತ್ರಿಯೂ ಅಲ್ಲದ,ಎಂಎಲ್ಎ ಅಥವಾ ಎಂಎಲ್ಸಿಯು ಅಲ್ಲದ, ರಾಜ್ಯದಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಯೂ ಅಲ್ಲದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯದ ಉನ್ನತ ಅಧಿಕಾರಿಗಳೊಡನೆ ಖಾಸಗಿ ಹೋಟೆಲ್ ಒಂದರಲ್ಲಿ ಸಭೆ ನಡೆಸಲು ಕಾರಣವೇನು? ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷವು ಪ್ರಜಾಪ್ರತಿನಿಧಿಗಳು ಅಧಿಕಾರವನ್ನು ನಡೆಸಲು ನಿಶ್ಶಕ್ತರೆ?. ರಾಜ್ಯ ಸರ್ಕಾರವು ತನ್ನ ಹೈಕಮಾಂಡ್​ಗೆ ಎಟಿಎಂ ತರ ನೆರವಾಗುವುದು ಎಂಬ ಚರ್ಚೆಗೆ ಇದು ಮುನ್ನುಡಿ ಅಲ್ಲವೇ? ಕಾಂಗ್ರೆಸ್ ಪಕ್ಷದಿಂದ ನೇಮಕವಾಗಿರುವ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಮ್ಮ ರಾಜ್ಯದ ಕಾರ್ಯಾಂಗವನ್ನು ತಮ್ಮ ಹಿಡಿತದಲ್ಲಿ ಅಥವಾ ಅಧೀನದಲ್ಲಿ ಇರಲು ತಂತ್ರ ರೂಪಿಸುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ದೇಶಾದ್ಯಂತ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವು ನಮ್ಮ ರಾಜ್ಯದಲ್ಲಿ ಅಧಿಕಾರ ಸಾಧಿಸಲು, ತಂತ್ರ ರೂಪಿಸಿ ಅರೆ ಬೆಂದ ಗ್ಯಾರಂಟಿಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಈ ಮೂಲಕ ರಾಜ್ಯದ ಜನರ ದಿಕ್ಕನ್ನು ತಪ್ಪಿಸಿ, ಉಚಿತಗಳ ಭರವಸೆಯನ್ನು ನೀಡಿ ರಾಜ್ಯದಲ್ಲಿ ಅಧಿಕಾರ ಸಾಧಿಸಿತು. ಜಗಜ್ಯೋತಿ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ (work is worship) ಇದರ ಅರ್ಥ ದುಡಿದು ಗಳಿಸಿ ತಿನ್ನಬೇಕು, ಸೂಕ್ಷ್ಮವಾಗಿ ಪುಕ್ಕಟೆಯಾಗಿ ತಿನ್ನಬಾರದೆಂದು ಸಂದೇಶ ನೀಡಿದರು.

ಇದೇ ಪರಿಸ್ಥಿತಿ ಮುಂದುವರೆದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತಹದಾಗಿದೆ. ರಾಜ್ಯದ ಮತದಾರರು ಇಂತಹ ವ್ಯವಸ್ಥೆಯನ್ನು ಖಂಡಿಸಿ ಜಾಗೃತರಾಗಬೇಕು, ತಮಗೆ ಸಿಗುವ ಅಮೂಲ್ಯ ಅವಕಾಶವನ್ನು ಚುನಾವಣೆ ಸಮಯದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಡಿ.ಎಸ್. ಅರುಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ: ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಶಾಸಕರ ನಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.