ಕೋಲಾರ: ತಪ್ಪು ಮಾಡಿಲ್ಲ ಎಂದರೆ, ಉಪ್ಪು ತಿಂದಿಲ್ಲ ಅಂದರೆ ಆರಾಮವಾಗಿ ಇರಬೇಕು ಅದನ್ನ ಬಿಟ್ಟು ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ನಂಜೇಗೌಡ ಹೇಳಿಕೆಗೆ ಸಂಸದ ಮುನಿಸ್ವಾಮಿ ತಿರುಗೇಟು ನೀಡಿದ್ರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ದರು ಅವರ ವಿರುದ್ಧ ಸರ್ಕಾರ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ. ನಾವು ಯಾವುದೇ ರೀತಿಯ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದರು. ಅಲ್ಲದೇ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿದವರು ಯಾರೇ ಆದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದು, ವೈಯಕ್ತಿಕವಾಗಿ ನಾನು ವಿಚಾರವನ್ನ ಪ್ರಸ್ತಾಪಿಸಿಲ್ಲ ಎಂದರು. ಅಲ್ಲದೇ ಇಲಾಖೆಯವರು ನಿಗದಿಪಡಿಸಿರುವಂತಹ ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ನಾವು ಇರಬೇಕಿರುವುದು ನಮ್ಮ ಕರ್ತವ್ಯ ಎಂದರು.
ಇದನ್ನೂ ಓದಿ: ಜಿಲ್ಲೆಯಲ್ಲಿ ನಾನೊಬ್ಬನೇ ಕ್ರಷರ್ ಮಾಲಿಕನಿದ್ದೇನಾ..? ಕ್ರಷರ್ ಪರಿಶೀಲನೆಗೆ ಶಾಸಕ ಗರಂ
ಇನ್ನು ಸಚಿವರು ಯಾವ ಸ್ಥಳಕ್ಕೆ ಹೋಗಬೇಕೆಂದು ನಿಗದಿಗೊಳಿಸಿರುವುದು ಇಲಾಖೆಯವರು, ಯಾವ ಸ್ಥಳಕ್ಕೆ ಹೋಗಬೇಕೆಂದು ನಾನು ಸ್ಥಳ ನಿಗದಿ ಮಾಡಿಲ್ಲ, ಅವರು ತಪ್ಪು ಮಾಡಿಲ್ಲ ಎಂದರೆ ಆರಾಮವಾಗಿ ಇರಬೇಕು ಎಂದರು.