ETV Bharat / state

ಒಂದೇ ಕಾರ್ಯಕ್ರಮ.. ಶಾಸಕ ಸಂಸದರಿಂದ ಎರಡು ಬಾರಿ ಉದ್ಘಾಟನೆ - ಈಟಿವಿ ಭಾರತ ಕನ್ನಡ

ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಭಗವಾನ್ ವಿಶ್ವಕರ್ಮ ಜಯಂತಿ‌ ಕಾರ್ಯಕ್ರಮವನ್ನು ಶಾಸಕ ಶ್ರೀನಿವಾಸಗೌಡ ಹಾಗೂ ಸಂಸದ ಮುನಿಸ್ವಾಮಿ ಪ್ರತ್ಯೇಕವಾಗಿ ಎರಡು ಬಾರಿ ಉದ್ಘಾಟಿಸಿದರು.

mla-and-mp-inaugurated-the-same-program-and-two-times
ಒಂದೇ ಕಾರ್ಯಕ್ರಮ.. ಶಾಸಕ ಮತ್ತು ಸಂಸದರಿಂದ ಎರಡು ಬಾರಿ ಉದ್ಘಾಟನೆ
author img

By

Published : Sep 17, 2022, 6:34 PM IST

ಕೋಲಾರ: ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಇಂದು ಜಿಲ್ಲಾಡಳಿತ ಹಾಗೂ ವಿಶ್ವಕರ್ಮ ಸಮಿತಿ ಆಯೋಜಿಸಿದ್ದ ಭಗವಾನ್ ವಿಶ್ವಕರ್ಮ ಜಯಂತಿ‌ ಕಾರ್ಯಕ್ರಮವನ್ನು ಎರಡು ಬಾರಿ ಉದ್ಘಾಟಿಸಿದ ಪ್ರಸಂಗ ನಡೆಯಿತು.

ವಿಶ್ವಕರ್ಮ ಜಯಂತಿ‌ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಹಾಜರಿದ್ದರು. ಅದೇ ಕಾರ್ಯಕ್ರಮಕ್ಕೆ ಸಂಸದ ಎಸ್.ಮುನಿಸ್ವಾಮಿ ಭಾಗವಹಿಸಬೇಕಿತ್ತು. ಆದರೆ, ಸಂಸದ ಮುನಿಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಅನ್ಯ ಕೆಲಸದ ನಿಮಿತ್ತ ಕುಳಿತಿದ್ದರು.

ಒಂದೇ ಕಾರ್ಯಕ್ರಮ.. ಶಾಸಕ ಮತ್ತು ಸಂಸದರಿಂದ ಎರಡು ಬಾರಿ ಉದ್ಘಾಟನೆ

ಇದನ್ನು ಅರಿತ ಶಾಸಕ ಶ್ರೀನಿವಾಸಗೌಡ ತಾವೊಬ್ಬರೇ ಕಾರ್ಯಕ್ರಮ ಉದ್ಘಾಟಿಸಿ ಹೊರ ನಡೆದರು. ತದನಂತರ ಬಂದ ಸಂಸದ ಎಸ್.ಮುನಿಸ್ವಾಮಿ ಮತ್ತೊಮ್ಮೆ ಅದೇ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದು ಕಾರ್ಯಕ್ರಮ ಆಯೋಜಕರಿಗೆ ಮುಜುಗರ ತರಿಸುವಂತಾಯಿತು.

ಕಾಂಗ್ರೆಸ್​ ಸಂಘಟನೆ ಮಾಡುತ್ತೇವೆ: ಇದೇ ವೇಳೆ, ಮಾಧ್ಯಮದವರೊಂದಿಗೆ ಶಾಸಕ ಶ್ರೀನಿವಾಸಗೌಡ ಮಾತನಾಡಿ, ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶದ ಕುರಿತು ನಾನೇನು ಮಾತನಾಡುವುದಿಲ್ಲ. ಆ ಪಕ್ಷವನ್ನು ನಾನು ಬಿಟ್ಟಿದ್ದೇನೆ. ಚುನಾವಣೆಗೆ ಇನ್ನು ಆರು ತಿಂಗಳು ಸಮಯಾವಕಾಶವಿದೆ. ಕಾಂಗ್ರೆಸ್​ ಪಕ್ಷ ಸಂಘಟನೆ ಮಾಡುತ್ತೇನೆ, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವ ಭರವಸೆ ಇದೆ ಎಂದರು.

ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ ಜೊತೆಗೆ ಸಚಿವ ಸಹ ಆಗಿದ್ದೆ. ಅದು ಬೇರೆ - ಬೇರೆ ಪಕ್ಷಗಳಿಂದ ಶಾಸಕನಾಗಿದ್ದೇನೆ. ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದೇ ಇದ್ದಲ್ಲಿ, ಆನಂತರ ತೀರ್ಮಾನ ತೆಗೆದುಕೊಳ್ಳುವೆ. ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಕರೆತರುತ್ತೇವೆ. ನಮ್ಮ ಕ್ಷೇತ್ರದಿಂದ ಅವರನ್ನು ನಿಲ್ಲಿಸಿ‌ ಗೆಲ್ಲಿಸುತ್ತೇವೆ. ಒಂದು ವೇಳೆ ಅವರು ಕೋಲಾರಕ್ಕೆ ಬರದಿದ್ದರೇ ನಾನೇ ನಿಲ್ಲುತ್ತೇನೆ ಎಂದರು.

ಇನ್ನು, ಇದೇ ಸಂದರ್ಭದಲ್ಲಿ ನಾನು ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಗೆದ್ದಾಗ ಜೆಡಿಎನ್​ನಲ್ಲಿರುವ ಈಗಿರುವ ನಾಯಕರು ಚಡ್ಡಿನೇ ಹಾಕಿರಲಿಲ್ಲ ಎಂದು ಶಾಸಕ ಶ್ರೀನಿವಾಸಗೌಡ ಯಾರ ಹೆಸರನ್ನೂ ಹೇಳದೆ ಕೋಲಾರ ಜೆಡಿಎಸ್ ನಾಯಕರನ್ನು ಕಿಚಾಯಿಸಿದರು.

ಇದನ್ನೂ ಓದಿ: ರಸ್ತೆ ಮಧ್ಯೆ ಅಂಬೇಡ್ಕರ್​ ಫೋಟೋವಿಟ್ಟು ವಿವಾದ: ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸಹಜ ಸ್ಥಿತಿ ನಿರ್ಮಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.