ಕೋಲಾರ: ಗ್ರಾಮ ಪಂಚಾಯ್ತಿಯಲ್ಲಿರುವ ಮಹತ್ವದ ದಾಖಲೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ದಾಖಲೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯಲ್ಲಿ ನಡೆದಿದೆ.
ಇನ್ನು ಪಂಚಾಯಿತಿ ಕಟ್ಟಡ ಹಳೆಯದಾಗಿದ್ದ ಕಾರಣ ಇತ್ತೀಚೆಗೆ ಕಚೇರಿಯನ್ನ, ಗ್ರಾಮದ ಸಮುದಾಯ ಭವನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಈ ವಿಚಾರವಾಗಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೇ ಪಂಚಾಯ್ತಿ ಈಗಿನ ಪಿಡಿಒ ಶಂಕರಪ್ಪ ಎಂಬಾತ ಸಾಕಷ್ಟು ಅವ್ಯವಹಾರಗಳು ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರ್ಟಿಐ ಮೂಲಕ ಮಾಹಿತಿ ಕೇಳಿದ್ದರು. ಹೀಗಾಗಿ ಮಾಹಿತಿ ನೀಡಬೇಕು ಎನ್ನುವ ಸಲುವಾಗಿ ಪಂಚಾಯ್ತಿಯಲ್ಲಿನ ಕಡತಗಳಿಗೆ ಪಿಡಿಒ ಚಂದ್ರಪ್ಪ ಅವರೇ ಬೆಂಕಿ ಹಚ್ಚಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಲ್ಲದೇ ಸರ್ಕಾರಿ ಕಡತಗಳನ್ನ ನಾಶಪಡಿಸಿರುವುದಕ್ಕೆ ಪಿಡಿಒ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸ್ಥಳಕ್ಕೆ ಶ್ರೀನಿವಾಸಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.