ಕೋಲಾರ: ದೇಶಕ್ಕಾಗಿ ಪ್ರಾಣಾರ್ಪಣೆಗೈದ ಹುತಾತ್ಮ ಯೋಧರ ನೆನಪಿಗಾಗಿ ಕೋಲಾರದಲ್ಲಿ ಬೃಹತ್ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆ.
ಜಿಲ್ಲೆಯ ಮಾಲೂರಿನ ಶಿವಾರಪಟ್ಟಣದಲ್ಲಿ ಕೆತ್ತನೆ ಮಾಡಲಾದ ಸ್ಮಾರಕದ ಶಿಲೆಯನ್ನು ನಗರದ ಪಿ.ಸಿ. ಬಡಾವಣೆಯ ಪಾರ್ಕ್ಗೆ ತರಲಾಯಿತು. ಈ ವೇಳೆ ಕೋಲಾರದ ಕೊಂಡರಾಜನಹಳ್ಳಿಯಿಂದ ಆ ಶಿಲೆಯನ್ನು ಅದ್ಧೂರಿ ಮೆರವಣಿಗೆ ಮೂಲಕ ತರಲಾಯಿತು. ಮಾಜಿ ಯೋಧರ ಸಂಘದ ಕಾರ್ಯಕರ್ತರು, ನೂರಾರು ಜನ ದೇಶಭಕ್ತರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಬ್ಯಾಂಡ್ ಸೆಟ್ ಮೂಲಕ ದಾರಿಯುದ್ದಕ್ಕೂ ನೂರಾರು ಜನ ಶಿಲೆಗೆ ಹೂವಿನ ಮಳೆ ಸುರಿಸಿದರು. ಮಾರ್ಗಮಧ್ಯದಲ್ಲಿ ವಿವಿಧ ಸಮುದಾಯಗಳ ಜನರು ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು.
ಓದಿ: 3ದಿನಗಳ ಬಳಿಕ ಮಡಿಲು ಸೇರಿದ ಮಗ: ಕರಾವಳಿಯಿಂದ ಬಯಲು ಸೀಮೆವರೆಗಿನ ಕಾರ್ಯಾಚರಣೆ ಹೀಗಿತ್ತು..!