ETV Bharat / state

ಸಿಡಿ ಹಿಂದೆ ಮಹಾನ್ ನಾಯಕನ ಕೈವಾಡ ಇದೆ ಎಂದು ನಾನು ಹೇಳಿಲ್ಲ : ಹೆಚ್‌ಡಿಕೆ - jarkiholi cd

ಬೆಳಗಾವಿ ಗಡಿ ಉದ್ವಿಗ್ನ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿನ ಸಿಡಿ‌ ಬೆಳವಣಿಗೆಯನ್ನು ಡೈವರ್ಟ್ ಮಾಡಲು ಇವರೇ ಸೃಷ್ಟಿ ಮಾಡಿದಂತೆ ಕಾಣುತ್ತಿದೆ ಎಂದಿದ್ದಾರೆ..

Kumaraswamy talks about CD
ಸಿಡಿ ಬಗ್ಗೆ ಕುಮಾರಸ್ವಾಮಿ ಮಾತು
author img

By

Published : Mar 15, 2021, 7:35 PM IST

ಕೋಲಾರ : ಸಿಡಿ ಹಿಂದೆ ಮಹಾನ್ ನಾಯಕರ ಕೈವಾಡವಿದೆ ಎಂದು ನಾನು ಹೇಳಿಲ್ಲ. ರಮೇಶ್ ಜಾರಕಿಹೊಳಿ ಮಹಾನ್ ನಾಯಕರ ಕೈವಾಡವಿದೆ ಎಂದು ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ, ಎಸ್ಐಟಿ ತಾತ್ಕಾಲಿಕವಾಗಿ ತನಿಖೆ ಮಾಡಿದಂತೆ ಸಾರುತ್ತಿದ್ದಾರೆಂದರು. ಪ್ರಕರಣದಲ್ಲಿ ಯಾರಿಗೆ ಅನ್ಯಾಯ ಆಗಿದೆ ಎಂದು ಎಸ್ಐಟಿಯವರೆ ಹೇಳಬೇಕು.

ಬೆಳಗಾವಿ ಗಡಿ ಉದ್ವಿಗ್ನ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿನ ಸಿಡಿ‌ ಬೆಳವಣಿಗೆಯನ್ನು ಡೈವರ್ಟ್ ಮಾಡಲು ಇವರೇ ಸೃಷ್ಟಿ ಮಾಡಿದಂತೆ ಕಾಣುತ್ತಿದೆ ಎಂದಿದ್ದಾರೆ. ನಾನೆಂದು ಸಿದ್ದರಾಮಯ್ಯ ಮನೆ ಬಾಗಿಲಿಗೆ ಹೋಗಿಲ್ಲ, ನನ್ನ ಪಕ್ಷದ ಕಾರ್ಯಕರ್ತರ ದುಡಿಮೆಯಿಂದ ಪಕ್ಷ ಕಟ್ಟಿಕೊಂಡು ಬಂದಿದ್ದೇನೆ.

ಅವರ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದರೆ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಅಲ್ಲದೆ ಕಾಂಗ್ರೆಸ್​ನವರು ಮೈತ್ರಿಗಾಗಿ ನಮ್ಮ ಬಳಿ ಬಂದಿದ್ದು, ಜೊತೆಗೆ ಕೈಕೊಟ್ಟಿದ್ದು ಸಹ ಕಾಂಗ್ರೆಸ್​ನವರು ಎಂದು ಕುಟುಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.