ಕೋಲಾರ: ಸರ್ಕಾರ ವಿಧಿಸಿರುವ ಸೆಸ್ ವಿರೋಧಿಸಿ ವರ್ತಕರು ಹಾಗೂ ರೈತರು ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮುಕ್ತವಾಗಿ ಕೃಷಿ ಉತ್ಪನ್ನಗಳ ಖರೀದಿಗಾಗಿ ವರ್ತಕರು ಸಮಿತಿಗೆ ಪಾವತಿಸುವ ಸೆಸ್ಅನ್ನು ಕೋವಿಡ್ ಸಮಸ್ಯೆ ಬಗೆಹರಿಯುವವರೆಗೂ ಪಾವತಿಸಲು ಸಾಧ್ಯವಿಲ್ಲವೆಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ತಿಂಗಳಿನಿಂದ ಸೆಸ್ ಸಂಗ್ರಹ ನಿಲ್ಲಿಸಿದ್ದ ಎಪಿಎಂಸಿ, ಇಂದಿನಿಂದ ವಸೂಲಿ ಕಾರ್ಯ ಆರಂಭಿಸಿತ್ತು. ಹಾಗಾಗಿ ಕೊರೊನಾ ನಡುವೆಯೇ ಸೆಸ್ ಸಂಗ್ರಹಕ್ಕೆ ಮುಂದಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಲುವಿಗೆ ವರ್ತಕರು ವಿರೋಧ ವ್ಯಕ್ತಪಡಿಸಿದ್ರು.
ವರ್ತಕರ ಪ್ರತಿಭಟನೆಗೆ ರೈತರು ಸಹ ಸಾಥ್ ನೀಡಿದ್ದು, ಎಪಿಎಂಸಿ ಕಾರ್ಯದರ್ಶಿ ರವಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಮಾರುಕಟ್ಟೆಯ ಚಟುವಟಿಕೆ ಮುಂದುವರೆಯಿತು.