ಕೋಲಾರ: ಸಾಮಾನ್ಯವಾಗಿ ಮಕ್ಕಳಿಗೆ ನಾಮಕರಣ ಮಾಡುವುದು ಸಹಜ. ಆದರೆ, ಜಿಲ್ಲೆಯ ರೈತನೊಬ್ಬ ತಾನು ಬೆಳೆದ ಟೊಮೆಟೊ ಬೆಳೆಗೆ ನಾಮಕರಣ ಮಾಡುವ ಮೂಲಕ ಗಮನ ಸೆಳೆದಿದ್ದು, ಅದರ ಸಂಪೂರ್ಣ ವರದಿ ಇಲ್ಲಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗಂಗನಹಳ್ಳಿ ಗ್ರಾಮದ ಶಿವಪ್ಪ ಎಂಬ ರೈತ, ತನ್ನ ತೋಟದಲ್ಲಿ ಟೊಮೆಟೊ ಬೆಳೆಗೆ ನಾಮಕರಣ ಕಾರ್ಯಕ್ರಮ ಮಾಡಿದ್ದಾರೆ. ಇನ್ನು ಉತ್ತಮವಾಗಿ ಬೆಳೆ ಬೆಳೆದಿದ್ದ ಹಿನ್ನೆಲೆ, ಟೊಮೆಟೊ ಸಸಿ ವಿತರಣೆ ಮಾಡಿದ ಕಂಪನಿಯವರು ರೈತನ ತೋಟಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಬೆಳೆಗೆ 'ಸಮೃದ್ದಿ' ಎಂಬ ಹೆಸರನ್ನು ನಾಮಕರಣ ಮಾಡಿ ಸ್ಥಳೀಯ ರೈತರ ಗಮನ ಸೆಳೆದಿದ್ದಾರೆ.
ಇನ್ನು ಖಾಸಗಿ ಕಂಪನಿಯೊಂದು ಹೊಸದಾಗಿ ಬಿಡುಗಡೆ ಮಾಡಿದ್ದ 5021 ಎಂಬ ಹೆಸರಿನ ಟೊಮೆಟೊ ತಳಿ ನೆಡಲಾಗಿತ್ತು. ಅಲ್ಲದೇ ಈ ತಳಿ ಸುಮಾರು 8 ಅಡಿಯಿಂದ 10 ಅಡಿಯವರೆಗೆ ಬೆಳೆದಿದ್ದು, ಉತ್ತಮ ಫಸಲನ್ನ ನೀಡಿದೆ. ಇದರಿಂದ ಟೊಮೆಟೊ ಬೆಳೆದಿದ್ದ ರೈತ ಶಿವಪ್ಪ ಫುಲ್ ಖುಷಿಯಾಗಿದ್ದಾನೆ.
ಇನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಹ ರೈತನ ತೋಟಕ್ಕೆ ಭೇಟಿ ನೀಡಿದ್ದು, ರೈತನ ಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಟೊಮೆಟೊ ತಳಿ ನೀಡಿದ್ದ ಖಾಸಗೀ ಕಂಪನಿಯವರು ರೈತನಿಗೆ ಕಿರುಕಾಣಿಕೆ ನೀಡಿ ಸನ್ಮಾನಿಸಿದ್ದಾರೆ.
ಓದಿ: ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್ಗೆ ಷರತ್ತುಬದ್ಧ ಜಾಮೀನು ಮಂಜೂರು