ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಲಾರ ಬಂದ್​

author img

By

Published : Dec 16, 2022, 10:19 AM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ಪ್ರಗತಿಪರ ಸಂಘಟನೆಗಳು ಇಂದು ಕೋಲಾರ ನಗರ ಬಂದ್​ಗೆ ಕರೆ ನೀಡಿವೆ.

bandh
ಕೋಲಾರ ಬಂದ್​
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಲಾರ ಬಂದ್​

ಕೋಲಾರ: ರಸ್ತೆ, ಬೀದಿ ದೀಪ, ಕಸ ವಿಲೇವಾರಿ, ಬೀದಿ ನಾಯಿ ಹಾವಳಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಲಾರ ಬಂದ್​ಗೆ​ ಕರೆ ನೀಡಲಾಗಿದೆ. ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬಂದ್ ನಡೆಸಲಾಗುತ್ತಿದ್ದು​, ಬೆಳ್ಳಂ ಬೆಳಗ್ಗೆ ರಸ್ತೆಗಿಳಿದ ಹೋರಾಟಗಾರರು ಕೋಲಾರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಖಾಸಗಿ ಶಾಲಾ ಬಸ್​ವೊಂದನ್ನು ತಡೆದ ಪ್ರತಿಭಟನಾಕಾರರು, ವಾಪಸ್ ಹೋಗುವಂತೆ ವಿದ್ಯಾರ್ಥಿಗಳ ಬಳಿ ಮನವಿ ಮಾಡಿದ್ರು. ಬಂದ್ ಹಿನ್ನೆಲೆ ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿದ್ದು, ಕೆಎಸ್ಆರ್​ಟಿಸಿ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ವಾಪಸ್​ ಹೋಗುತ್ತಿದ್ದಾರೆ. ಜೊತೆಗೆ ನಗರಾದ್ಯಂತ ಬೈಕ್ ಜಾಥಾ ನಡೆಸಿ, ಅಂಗಡಿ ಮುಂಗಟ್ಟುಗಳನ್ನ ಮುಚ್ಚುವಂತೆ ಮಾಲೀಕರಿಗೆ ಮನವಿ ಮಾಡಲಾಯಿತು.

ಇದನ್ನೂ ಓದಿ: ತುಮಕೂರು: ಕೊಬ್ಬರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ತಿಪಟೂರು ಬಂದ್ ಯಶಸ್ವಿ..!

ಬಂದ್​ ಪರಿಣಾಮ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ನಗರದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಾಗೂ ಬಲವಂತದಿಂದ ಬಂದ್​ ಮಾಡದಂತೆ ಸಂಘಟನೆಗಳಿಗೆ ಎಸ್​ಪಿ ಡಿ.ದೇವರಾಜ್​ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.